ಏಲಿಯನ್‍ಗೆ ಕಳುಹಿಸಲು ಉತ್ತಮ ಸಂದೇಶ ಸೂಚಿಸಿದ್ರೆ ಬಹುಮಾನ..!
ಅನ್ಯಗ್ರಹ ಜೀವಿಗಳಿಗೆ ಕಳುಹಿಸಲು ಅತ್ಯುತ್ತಮವಾದ ಸಂದೇಶ ವನ್ನು ಯಾರು ರಚಿಸುತ್ತಾರೋ ಅವರಿಗೆ ಬರೋಬ್ಬರಿ 6 ಕೋಟಿ ಬಹುಮಾನ ಸಿಗಲಿದೆ...

ಲಂಡನ್: ಅನ್ಯಗ್ರಹ ಜೀವಿಗಳಿಗೆ ಕಳುಹಿಸಲು ಅತ್ಯುತ್ತಮವಾದ ಸಂದೇಶ ವನ್ನು ಯಾರು ರಚಿಸುತ್ತಾರೋ ಅವರಿಗೆ ಬರೋಬ್ಬರಿ 6 ಕೋಟಿ ಬಹುಮಾನ ಸಿಗಲಿದೆ.
ಆದರೆ, ಒಂದೇ ಒಂದು ಷರತ್ತು. ಅದೇನೆಂದರೆ, ಆ ಸಂದೇಶವು ಮಾನವರು ಬಳಸುವ ಭಾಷೆಯಲ್ಲಿರಬಾರದು! ಏಲಿಯನ್ ಗಳ ಸಂಶೋಧನೆಗಾಗಿ 100 ದಶಲಕ್ಷ ಡಾಲರ್‍ನಷ್ಟು ಹಣಕಾಸು ನೆರವು ನೀಡುತ್ತಿರುವ ರಷ್ಯಾದ ಕೋಟ್ಯಧಿಪತಿ ಯೂರಿ ಮಿಲ್ನರ್ ಅವರು ಈ ಬಹುಮಾನ ಘೋಷಿಸಿದ್ದಾರೆ. ಕಳೆದ ವಾರವಷ್ಟೇ ಖ್ಯಾತ ಬ್ರಿಟೀಷ್ ಭೌತ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಲಂಡನ್‍ನ ರಾಯಲ್ ಸೊಸೈಟಿಯಲ್ಲಿ ಅನ್ಯಗ್ರಹ ಜೀವಿಗಳ ಪತ್ತೆ ಯೋಜನೆಗೆ ಚಾಲನೆ ನೀಡಿದ್ದಾರೆ.
ಮೊದಲಿಗೆ ಅನ್ಯಗ್ರಹದ ನಾಗರಿಕರಿಗೆ ಭೂಮಿಯ ವತಿಯಿಂದ ಒಂದು ಉತ್ತಮ ಸಂದೇಶವನ್ನು ಕಳುಹಿಸ ಬೇಕಾಗಿದೆ. ಅದಕ್ಕಾಗಿ ಜನರಿಂದ ಸಂದೇಶವನ್ನು ಆಹ್ವಾನಿಸುತ್ತಿದ್ದೇವೆ. ಸಂದೇಶಗಳು ಅನ್ಯಗ್ರಹಗಳನ್ನು ತಲುಪಲು ಇನ್ನೂ ಸಾವಿರಾರು ವರ್ಷ ತಲುಪಬಹುದು. ಆದರೆ, ಅದರಲ್ಲಿ ಸಾಕಷ್ಟು ಮಾಹಿತಿ, ವಿವರಗಳಿರಬೇಕಾದ್ದು ಕಡ್ಡಾಯ ಎಂದು ಖಗೋಳಶಾಸ್ತ್ರಜ್ಞ ಫ್ರಾಂಕ್ ಡ್ರೇಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


