ವಿಜ್ಞಾನ-ತಂತ್ರಜ್ಞಾನ

ಬರಲಿದೆ... ನೀವು ಗರ್ಭಿಣಿಯಾ ಇಲ್ಲವಾ ಎಂದು ತಿಳಿಸುವ ಸ್ಮಾರ್ಟ್ ಫೋನ್

ಸ್ಮಾರ್ಟ್ ಫೋನ್ ಗೆ ಸಂಬಂಧಿಸಿದಂತೆ ನಡೆದಿರುವ ವಿಜ್ಞಾನಿಗಳ ಹೊಸ ಸಂಶೋಧನೆಯಿಂದ ನೀವು ಗರ್ಭಿಣಿಯಾ ಇಲ್ಲವಾ ಎಂಬುದನ್ನೂ ಇನ್ನು ಮುಂದೆ ತಿಳಿದುಕೊಳ್ಳಬಹುದಾಗಿದೆ.

ಬರಲಿದೆ... ನೀವು ಗರ್ಭಿಣಿಯಾ ಇಲ್ಲವಾ ಎಂದು ತಿಳಿಸುವ ಸ್ಮಾರ್ಟ್ ಫೋನ್
ಗರ್ಭಿಣಿಯಾ ಇಲ್ಲವಾ ಎಂಬುದನ್ನು ತಿಳಿಸಲಿರುವ ಸ್ಮಾರ್ಟ್ ಫೋನ್(ಸಾಂಕೇತಿಕ ಚಿತ್ರ)
Published On :

ಲಂಡನ್: ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ಕೂತಲ್ಲೇ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಸೌಲಭ್ಯವಿದೆ. ಸ್ಮಾರ್ಟ್ ಫೋನ್ ಗೆ ಸಂಬಂಧಿಸಿದಂತೆ ನಡೆದಿರುವ ವಿಜ್ಞಾನಿಗಳ ಹೊಸ ಸಂಶೋಧನೆಯಿಂದ ನೀವು ಗರ್ಭಿಣಿಯಾ ಇಲ್ಲವಾ ಎಂಬುದನ್ನೂ ಇನ್ನು ಮುಂದೆ ತಿಳಿದುಕೊಳ್ಳಬಹುದಾಗಿದೆ. 

ಸ್ವಯಂ ಕಾರ್ಯನಿರ್ವಹಿಸುವ ಫೈಬರ್ ಆಪ್ಟಿಕ್ ಸೆನ್ಸಾರ್ ನ್ನು ಸ್ಮಾರ್ಟ್ ಫೋನ್ ಗಳಿಗಾಗಿಯೇ ಅಭಿವೃದ್ಧಿಪಡಿಸಲಾಗಿದ್ದು ಇದು ಗರ್ಭಧಾರಣೆ, ಮಧುಮೇಹ ಪತ್ತೆ ಸೇರಿದಂತೆ ವಿವಿಧ ರೀತಿಯ ಜೈವಿಕಅಣು ಪರೀಕ್ಷೆಗಳಲ್ಲಿ ಉಪಯುಕ್ತವಾಗಲಿದೆ.

ಸಂವೇದಕ ಸೂಚ್ಯಂಕಗಳು ಸ್ಮಾರ್ಟ್ ಫೋನ್ ಆಪ್ ಮೂಲಕ ಗೋಚರಿಸಲಿದ್ದು, ಫಲಿತಾಂಶ ಪಡೆಯಬಹುದಾಗಿದೆ. ಸ್ಮಾರ್ಟ್ ಫೋನ್ ಗಳಿಗಾಗಿಯೇ ಚಿಪ್ ಗಳಲ್ಲಿ ಲ್ಯಾಬ್ ಗೆ ಅಗತ್ಯವಿರುವ ಸಣ್ಣ ಮತ್ತು ದೃಢವಾದ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ನಮಗಿದೆ ಎಂದು ಲಂಡನ್ ನ ಸಂಶೋಧಕರು ಹೇಳಿದ್ದಾರೆ.

ಸೆನ್ಸಾರ್ ರೀಡಿಂಗ್ ಗಳನ್ನು ಜಿಪಿಎಸ್ ನೊಂದಿಗೆ ಸಂಯೋಜಿಸಿ, ಬಳಕೆದಾರರಿಗೆ  ಅಗತ್ಯವಿರುವ ಔಷಧಾಲಯ, ಆಸ್ಪತ್ರೆ ಅಥವಾ ಆಂಬುಲೆನ್ಸ್ ಬಗ್ಗೆಯೂ ಮಾಹಿತಿ ನೀಡುವ ಸೌಲಭ್ಯವನ್ನೂ ಸ್ಮಾರ್ಟ್ ಫೋನ್ ಗಳಲ್ಲಿ ಪರಿಚಯಿಸಲಾಗುತ್ತಿದೆ.  ಸರ್ಫೇಸ್ ಪ್ಲಾಸ್ಮೊನ್ ರೆಸೋನೆನ್ಸ್ ಬಯೊಸೆನ್ಸಿಂಗ್ ನಲ್ಲಿ ಬಳಕೆಯಾಗುವುದಾಗಿದ್ದು, ಇದಕ್ಕಾಗಿ ಬೃಹತ್ ಲ್ಯಾಬ್ ಉಪಕರಣಗಳ ಅಗತ್ಯವಿದೆ.

ಅದೃಷ್ಟವಶಾತ್ ಸರ್ಫೇಸ್ ಪ್ಲಾಸ್ಮೊನ್ ರೆಸೋನೆನ್ಸ್ ಗೆ ಅಗತ್ಯವಿರುವಿರುವ ಅಂಶಗಳು ಸ್ಮಾರ್ಟ್ ಫೋನ್ ಗಳಲ್ಲೂ ಲಭ್ಯವಿದ್ದು, ಫೈಬರ್ ಆಪ್ಟಿಕ್ ಸೆನ್ಸಾರ್ 400 ಮೈಕ್ರೊಮೀಟರ್ ಡಯಾಮೀಟರ್ ಹೊಂದಿರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.  ಪ್ರಸ್ತುತ ಬಳಕೆಯಾಗುತ್ತಿರುವ ಉಪಕರಣಗಳಿಗೆ ಹೊಸ ಸಂಶೋಧನೆ ಸರಿಸಾಟಿಯಾಗಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಶೋಧನೆ ಬಗ್ಗೆ ಜರ್ನಲ್ ಆಪ್ಟಿಕ್ಸ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.