ವಿಜ್ಞಾನ-ತಂತ್ರಜ್ಞಾನ

ಸಿಂಗಾಪುರದ ಉಪಗ್ರಹಗಳ ಉಡಾವಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಇಸ್ರೋ ತಂಡಕ್ಕೆ ಅಭಿನಂದನೆ

ಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತ ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

ಸಿಂಗಾಪುರದ ಉಪಗ್ರಹಗಳ ಉಡಾವಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಇಸ್ರೋ ತಂಡಕ್ಕೆ ಅಭಿನಂದನೆ
ಇಸ್ರೋದಿಂದ ಉಪಗ್ರಹ(ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
ಸಿಂಗಾಪುರದ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋ ಸಾಧನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಪಿಎಸ್ಎಲ್ ವಿ-ಸಿ 29 ಯಶಸ್ವೀ ಉಡಾವಣೆಯಾಗಿ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಮೈಕ್ರೋ ಉಪಗ್ರಹ(ಸೂಕ್ಷ್ಮ ಉಪಗ್ರಹ) ಹಾಗೂ ನ್ಯಾನೋ ಉಪಗ್ರಹಗಳೊಂದಿಗೆ ಸಿಂಗಾಪುರದ ಪ್ರಥಮ ವಾಣಿಜ್ಯ ಭೂ ಸರ್ವೇಕ್ಷಣಾ ಉಪಗ್ರಹ TeLEOS-1 ನ್ನೂ ಸಹ ಉಡಾವಣೆ ಮಾಡಲಾಗಿದ್ದು ಭಾರತದ ಬಾಹ್ಯಾಕಾಶ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ. ಸಿಂಗಪುರದ 6 ಉಪಗ್ರಹದ ಉಡಾವಣೆಯಿಂದಾಗಿ ಭಾರತಕ್ಕೆ 26 ಮಿಲಿಯನ್ ಯುರೋಗಳಷ್ಟು ಲಾಭ ಬರಲಿದ್ದು, ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ಈ ವರೆಗೂ 15 ಮಿಲಿಯನ್ ಡಾಲರ್ ಹಾಗೂ 80 ಮಿಲಿಯನ್ ಯುರೋಗಳನ್ನು ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.