ವಿಜ್ಞಾನ-ತಂತ್ರಜ್ಞಾನ

ಟ್ವಿಟರ್ ಖಾತೆಯಲ್ಲಿ ಪೂರ್ತಿಚಿತ್ರ

ಟ್ವಿಟರ್‍ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್‍ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್ ಮಾಡಿ (ಕತ್ತರಿಸಿ)ಟೈಮ್ ಲೈನ್‍ನಲ್ಲಿ ಪ್ರದರ್ಶಿಸುತ್ತಿತ್ತು...

ಟ್ವಿಟರ್ ಖಾತೆಯಲ್ಲಿ ಪೂರ್ತಿಚಿತ್ರ
ಟ್ವಿಟ್ಟರ್ ನಲ್ಲಿ ಭಾವಚಿತ್ರ (ಸಂಗ್ರಹ ಚಿತ್ರ)
Published On :

ನವದೆಹಲಿ: ಟ್ವಿಟರ್‍ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್‍ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್  ಮಾಡಿ (ಕತ್ತರಿಸಿ)ಟೈಮ್ ಲೈನ್‍ನಲ್ಲಿ ಪ್ರದರ್ಶಿಸುತ್ತಿತ್ತು.

ನಂತರ ಅದರ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಚಿತ್ರ ಗೋಚರಿಸುತ್ತಿತ್ತು. ಆದರೆ, ಇನ್ನು ಮುಂದೆ ಅಪ್ ಲೋಡ್ ಮಾಡಿದ ಚಿತ್ರ ಟೈಮ್ ಲೈನ್‍ನಲ್ಲಿ ಪೂರ್ತಿಕಾಣಿಸಲಿದೆ. ಈ  ಕುರಿತು ಟ್ವಿಟಿರ್ ತನ್ನ ಬ್ಲಾಗ್ ಸ್ಪಾಟ್‍ನಲ್ಲಿ ಪ್ರಕಟಿಸಿದೆ. ಚಿತ್ರಗಳ ಪ್ರದರ್ಶನ ರೀತಿಯನ್ನೂ ಬಲಸಿರುವ ಟ್ವಿಟರ್, ಮಲ್ಟಿ ಫೋಟೋ ಡಿಸ್‍ಪ್ಲೆಯನ್ನು ಜಾರಿಗೆ ತರುತ್ತಿದೆ. ಇನ್ನು ಮುಂದೆ ಟೈಮ್ ಲೈನ್  ಮತ್ತಷ್ಟು ಚಿತ್ರವತ್ತಾಗಿರಲಿದೆ ಎಂದೂ ಟ್ವಿಟರ್ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.