ಫೇಸ್ ಬುಕ್ ಹೊಸ ದಾಖಲೆ: ಒಂದೇ ದಿನದಲ್ಲಿ ಒಂದು ಬಿಲಿಯನ್ ಜನರಿಂದ ಬಳಕೆ
ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿರುವ ಫೇಸ್ ಬುಕ್ ನ ಸಿಇಒ ಮಾರ್ಕ್ ಝಕರ್ಬರ್ಗ್ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಒಂದು ಬಿಲಿಯನ್ ಬಳಕೆದಾರರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರದಂದು ಪ್ರತಿ 7 ಜನರಲ್ಲಿ ಒಬ್ಬರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಮಾರ್ಕ್ ಝಕರ್ಬರ್ಗ್ ಮಾಹಿತಿ ನೀಡಿದ್ದಾರೆ.
ಆಧುನಿಕ ಜಗತ್ತಿನ ಅವಕಾಶಗಳನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಸಂಸ್ಥೆ ಪ್ರತಿಯೊಬ್ಬ ವ್ಯಕ್ತಿಗೂ ಧ್ವನಿಯಾಗಿರುತ್ತದೆ. ಸಂಪರ್ಕ ಹೊಂದಿರುವ ಜಗತ್ತು ಎಂದಿಗೂ ಉತ್ತಮವಾಗಿರುತ್ತದೆ, ಫೇಸ್ ಬುಕ್ ನ ಸಮುದಾಯದ ಭಾಗವಾಗಿರುವವರಿಗೆ ಮಾರ್ಕ್ ಝಕರ್ಬರ್ಗ್ ಧನ್ಯವಾದ ಅರ್ಪಿಸಿದ್ದಾರೆ. ಫೇಸ್ ಬುಕ್ ಅತಿ ಹೆಚ್ಚು ನೆಟ್ ಟ್ರಾಫಿಕ್ ಹೊಂದಿರುವ ಜಗತ್ತಿನ ಎರಡನೇ ಜಾಲತಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


