ಫೇಸ್‌ಬುಕ್‌ನಲ್ಲಿ ಹೆಚ್ಚಿನವರು Ha ha ಎಂದೇ ಖುಷಿ ವ್ಯಕ್ತಪಡಿಸುತ್ತಾರಂತೆ!
ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ...

ನ್ಯೂಯಾರ್ಕ್: ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ. ಅದರಲ್ಲಿ ಹೆಚ್ಚಿನ ಜನರು ತಮಗೆ ಖುಷಿಯಾದಾಗ "ha ha" ಎಂದು ಬರೆದು ಇಮೋಜಿ ಬಳಸುತ್ತಾರಂತೆ. ಇನ್ನು ಕೆಲವರು he he ಮತ್ತು "LOL (laughing out loud)" ಎಂದು ಬರೆದು ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಾರಂತೆ.
ಬಹುತೇಕ ಜನರು "haha ಬಳಸುವವರು( 51.4 ಶೇ ), ಇಮೋಜಿ ಬಳಸುವವರು (33.7 ಶೇ). hehe ಬಳಸುವವರು(12.7 ಶೇ) ಹಾಗೆಯೇ lol ಬಳಸುವವರು 1.9 ಶೇ ಇದ್ದಾರೆ.
ಇ-ನಗುವವರು ಎಷ್ಟು ಬಾರಿ ಇಂಥಾ ಪದಗಳನ್ನು ಬಳಸುತ್ತಾರೆ ಎಂಬುದನ್ನೂ ಫೇಸ್ ಬುಕ್ ಅಧ್ಯಯನ ನಡೆಸಿದೆ
ಶೇ. 46ರಷ್ಟು ಮಂದಿ ಒಂದು ವಾರದಲ್ಲಿ ಒಂದೇ ಒಂದು ಸಾರಿ ಹೀಗೆ ನಗ್ತಾರಂತೆ. ಅದೇ ವೇಳೆ ಶೇ 85ರಷ್ಟು ಮಂದಿ ವಾರದಲ್ಲಿ 5 ಬಾರಿ ಹೀಗೆ ನಗ್ತಾರೆ.
ಇದರಲ್ಲಿ ಶೇ. 52 ಮಂದಿ ಒಂದೇ ರೀತಿಯ ನಗು ಅನುಸರಿಸಿದರೆ, ಶೇ. 20ರಷ್ಟು ಮಂದಿ ಎರಡು ವಿಧಗಳಲ್ಲಿ ನಗ್ತಾರಂತೆ.
ಅವರ ನಗುವಿಗೆ ತಕ್ಕಂತೆ ಅವರು ಅಲ್ಲಿ haha, hehe, ಇಮೋಜಿ ಮತ್ತು LOL ಬಳಸುತ್ತಾರಂತೆ.
ಇ ನಗುವಿನಲ್ಲಿ ವಯಸ್ಸು, ಲಿಂಗದ ಹಾಗೂ ಭೌಗೋಳಿಕ ಪ್ರದೇಶದಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.
ಯುವ ಜನತೆ ಮತ್ತು ಮಹಿಳೆಯರು ಇಮೋಜಿ ಬಳಸಿದರೆ, ಗಂಡಸರು ಹೆಚ್ಚಾಗಿ he he ಎಂದು ಬಳಸುತ್ತಾರಂತೆ.
ಮಹಿಳೆಯರು ಮತ್ತು ಪುರುಷರು hehe ಇಷ್ಟಪಡುತ್ತಿದ್ದು, ಇನ್ನುಳಿದವರು hehe ಮತ್ತು LOL ಜತೆ ಇಮೋಜಿಯನ್ನೂ ಇಷ್ಟಪಡುತ್ತಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


