ಭಾರತ- ಇಸ್ರೇಲ್ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ
ಭಾರತ- ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿಯ ಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ದೂರಗಾಮಿ ಬರಾಕ್ 8 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಈ ತಿಂಗಳಲ್ಲಿ ನಡೆಯಲಿದೆ.

ನವದೆಹಲಿ: ಭಾರತ- ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿಯ ಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ದೂರಗಾಮಿ ಬರಾಕ್ 8 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಈ ತಿಂಗಳಲ್ಲಿ ನಡೆಯಲಿದೆ. ಭಾರತ- ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ, ಒಳಬರುವ ಕ್ಷಿಪಣಿಯ ಹಾಗೂ ಡ್ರೋನ್ ಗಳ ದಾಳಿಯ ರಕ್ಷಕನಾಗಿ ಕಾರ್ಯನಿರ್ವಹಿಸಲಿದೆ.
ಇಸ್ರೇಲ್ ನಲ್ಲಿ ಮೊದಲ ಪ್ರಯೋಗ ನಡೆಯಲಿದ್ದು, ಇದು ಯಶಸ್ವಿಯಾದರೆ ಮತ್ತೊಂದು ಪರೀಕ್ಷೆಯನ್ನು ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ನಡೆಸಲಾಗುತ್ತದೆ. ಬರಾಕ್ -8 ಕ್ಷಿಪಣಿಗಳು ಭಾರತದ ಯುದ್ಧನೌಕೆಗಳಲ್ಲಿ ಬಳಕೆಯಾಗಲಿವೆ. ಕಳೆದ ನವೆಂಬರ್ ನಲ್ಲಿ ಇಸ್ರೇಲ್ ನಲ್ಲಿ ನಡೆಸಲಾದ ಪರೀಕ್ಷೆ ಯಶಸ್ವಿಯಾಗಿದೆ. ನಂತರದ ಪರೀಕ್ಷೆ ಭಾರತದಲ್ಲಿ ನಡೆಯಬೇಕಿತ್ತಾದರೂ ಭಾರತೀಯ ನೌಕಾ ಪಡೆ ಕಳೆದ ಪರೀಕ್ಷೆ ವೇಳೆ ಕೆಲ ಬದಲಾವಣೆಗೆ ಸೂಚಿಸಿತ್ತು. ಆದ್ದರಿಂದ ಬದಲಾವಣೆಗೊಂಡ ನಂತರ ನಡೆಯುತ್ತಿರುವ ಕ್ಷಿಪಣಿಯ ಪರೀಕ್ಷೆ ಇಸ್ರೇಲ್ ನಲ್ಲೇ ನಡೆಯಲಿದೆ. ಈ ಬಾರಿಯ ಕ್ಷಿಪಣಿ ಪರೀಕ್ಷೆ ಬದಲಾವಣೆಗಳು ಯಶಸ್ವಿಯಾಗಿರಿವುದರ ಬಗ್ಗೆ ತಿಳಿಸಲಿದೆ.
ಈ ಕ್ಷಿಪಣಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಹಾಗೂ ಭಾರತದ ಡಿ.ಆರ್.ಡಿ.ಒ, ಇಸ್ರೇಲ್ ನ ಶಸ್ತ್ರಾಸ್ತ್ರ ಅಭಿವೃದ್ಧಿ ಆಡಳಿತಮಂಡಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಪಾಕಿಸ್ತಾನ ಹಾಗೂ ಚೀನಾ ನೌಕಾಪಡೆಯಿಂದ ಎದುರಾಗಬಹುದಾದ ದಾಳಿಯನ್ನು ತಡೆಗಟ್ಟಲು ಭಾರತ- ಇಸ್ರೇಲ್ ಅಭಿವೃದ್ಧಿ ಪಡಿಸಿರುವ ಕ್ಷಿಪಣಿ ನೆರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


