ವಿಜ್ಞಾನ-ತಂತ್ರಜ್ಞಾನ

ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ ೮೦೦ ದಶಲಕ್ಷ ಸಕ್ರಿಯ ಬಳಕೆದಾರರು

ವಿಶ್ವದ ಅತಿ ಜನಪ್ರಿಯ ಸಂದೇಶ ರವಾನೆ ಆಪ್ ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ ೮೦೦ ದಶಲಕ್ಷ ಸಕ್ರಿಯ ಬಳಕೆದಾರರಿದ್ದಾರೆ.

ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ ೮೦೦ ದಶಲಕ್ಷ ಸಕ್ರಿಯ ಬಳಕೆದಾರರು
ವಾಟ್ಸ್ಯಾಪ್
Published On :

ವಿಶ್ವದ ಅತಿ ಜನಪ್ರಿಯ ಸಂದೇಶ ರವಾನೆ ಆಪ್ ವಾಟ್ಸ್ಯಾಪ್ ಗೆ ಈಗ ತಿಂಗಳಿಗೆ ೮೦೦ ದಶಲಕ್ಷ ಸಕ್ರಿಯ ಬಳಕೆದಾರರಿದ್ದಾರೆ.

ಫೇಸ್ಬುಕ್ ಒಡೆತನದ ವಾಟ್ಸ್ಯಾಪ್ ಸಿಇಒ ಜಾನ್ ಕೌಮ್ ಈ ವಿಷಯವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. "ವಾಟ್ಸ್ಯಾಪ್- ಈಗ ತಿಂಗಳಲ್ಲಿ  ೮೦೦ ದಶಲಕ್ಷ ಸಕ್ರಿಯ ಬಳಕೆದಾರರಿಗೆ ಸೇವೆ ನೀಡುತ್ತಿದೆ. ಮಾಧ್ಯಮವರಿಗೊಂದು ಸೂಚನೆ. ನೊಂದಾಯಿಸಿದ ಮತ್ತು ಸಕ್ರಿಯ ಬಳಕೆದಾರರ ಸಂಖ್ಯೆ ಬೇರೆ ಬೇರೆ" ಎಂದು ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ ೨೧೦೪ ರಲ್ಲಿ ೬೦೦ ದಶಲಕ್ಷ ಮತ್ತು ಜವರಿಯಲ್ಲಿ ೭೦೦ ದಶಲಕ್ಷ ಸಕ್ರಿಯ ಬಳಕೆದಾರರಿದ್ದ ವಾಟ್ಸ್ಯಾಪ್ ಗೆ ಈಗ ಸಕ್ರಿಯ ಬಳಕೆದಾರರ ಸಂಖ್ಯೆ ೮೦೦ ದಶಲಕ್ಷಕ್ಕೆ ಬೆಳೆದಿರುವುದು ಉತ್ತಮ ಬೆಳವಣಿಗೆ ಎಂದು ಬಣ್ಣಿಸಲಾಗಿದೆ.

ಈ ಸೇವೆಯಲ್ಲಿ ಬರೆದ ಸಂದೇಶಗಳನ್ನು, ಮಾತಿನ ಸಂದೇಶಗಳನ್ನು, ಫೋಟೋಗಳನ್ನು, ವಿಡಿಯೋಗಳನ್ನು ಉಚಿತವಾಗಿ ಹಂಚಿಕೊಳ್ಳಬಹುದು. ಹಾಗೆಯೇ ಇತ್ತೀಚೆಗೆ ವಾಟ್ಸ್ಯಾಪ್ ಅಂತರ್ಜಾಲದ ಮೇಲೆ ಕರೆ ಸೇವೆಗೂ ಬಳಕೆದಾರರಿಗೆ ಅವಕಾಶ ನೀಡಿದೆ.

ಟ್ವಿಟ್ಟರ್ ಮತ್ತು ಇಂಸ್ಟಾಗ್ರಾಮ್ ಸೇವೆಗಳನ್ನು ಹಿಂದಿಕ್ಕಿರುವ ವಾಟ್ಸ್ಯಾಪ್ ಬಹಳ ಜನಪ್ರಿಯ ಸೇವೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.