ವಿಜ್ಞಾನ-ತಂತ್ರಜ್ಞಾನ

ಭಾರತಕ್ಕೆ ಲಗ್ಗೆ ಇಡಲಿದೆ ವಿಶ್ವದ ಪ್ರಥಮ 4 ಜಿಬಿ RAM ಸಾಮಥ್ಯದ 'ಏಸಸ್ ಝೆನ್ ಫೋನ್'

ಭಾರತದಲ್ಲಿಗ ಸ್ಮಾರ್ಟ್ ಫೋನ್ ಗಳದ್ದೇ ಆರ್ಭಟ. ವಿಶೇಷ ಫಿಚರ್ಸ್ ಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ...

ಭಾರತಕ್ಕೆ ಲಗ್ಗೆ ಇಡಲಿದೆ ವಿಶ್ವದ ಪ್ರಥಮ 4 ಜಿಬಿ RAM ಸಾಮಥ್ಯದ 'ಏಸಸ್ ಝೆನ್ ಫೋನ್'
ಏಸಸ್ ಝೆನ್ ಫೋನ್ 2
Published On :

ನವದೆಹಲಿ: ಭಾರತದಲ್ಲಿಗ ಸ್ಮಾರ್ಟ್ ಫೋನ್ ಗಳದ್ದೇ ಆರ್ಭಟ. ವಿಶೇಷ ಫಿಚರ್ಸ್ ಗಳನ್ನು ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಮೊಬೈಲ್ ಕಂಪನಿಗಳು ಹವಣಿಸುತ್ತಿವೆ. ಈ ಮಧ್ಯೆ ಐಫೋನ್ ಗೆ ಪೈಪೋಟಿ ನೀಡಲು ತೈವಾನ್ ದೇಶದ Asus Zenfone 2 ಸ್ಮಾರ್ಟ್ ಫೋನು ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 23 ರಂದು ಲಗ್ಗೆಯಿಡುತ್ತಿದೆ.

ವಿಶೇಷವೆಂದರೆ ಈ ಫೋನ್ ನಲ್ಲಿ 4ಜಿಬಿ RAM ಮೆಮೋರಿ ಹೊಂದಿದ್ದು, ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ ಫೋನ್ ಇದಾಗಿಲಿದೆ. ಈ ಮಾಡೆಲ್, ಮೂರು ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ.

ವಿಶ್ವದ ಮೊದಲ 4ಜಿಬಿ ರ್ಯಾಮ್ ಫೋನ್ ಎಂದಷ್ಟೇ ಅಲ್ಲ, ಇದು ವಿಶ್ವದ ಅತ್ಯುತ್ತಮ ಬ್ಯಾಕ್ ಲೈಟ್ ಮೋಡ್ ಹೊಂದಿರುವ ಫೋನ್ ಎಂದೂ ಹೆಗ್ಗಳಿಕೆ ಹೊಂದಿದೆ.

3,000 mAh ಸಾಮರ್ಥ್ಯ ಹೊಂದಿರುವ ಈ ಫೋನ್'ನ ಬ್ಯಾಟರಿಯನ್ನ ತುಂಬಾ ಬೇಗ ಚಾರ್ಜ್ ಮಾಡಬಹುದಂತೆ. 5.5 ಇಂಚು ಹೆಚ್'ಡಿ ಪರದೆ ಹೊಂದಿರುವ ಈ ಸ್ಮಾರ್ಟ್'ಫೋನ್'ನಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಸೌಲಭ್ಯವಿದೆ. ಏಪ್ರಿಲ್ 23ರಂದು ಬಿಡುಗಡೆಯಾಗಲಿರುವ ಏಸಸ್ ಝೆನ್'ಫೋನ್ 2 ಸ್ಮಾರ್ಟ್ ಫೋನ್ ನ ಬೆಲೆಯನ್ನು ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.