ವಿಜ್ಞಾನ-ತಂತ್ರಜ್ಞಾನ

ವೀಡಿಯೋ ಮೂಲಕ ಫೇಸ್‌ಬುಕ್ ಫ್ರೆಂಡ್ಸ್‌ಗೆ ಥ್ಯಾಂಕ್ಸ್ ಹೇಳಿ

ಫೇಸ್‌ಬುಕ್‌ನಲ್ಲಿ ಈ ಸ್ಪೆಷಲ್ ವೀಡಿಯೋ...

ವೀಡಿಯೋ ಮೂಲಕ ಫೇಸ್‌ಬುಕ್ ಫ್ರೆಂಡ್ಸ್‌ಗೆ ಥ್ಯಾಂಕ್ಸ್  ಹೇಳಿ
ಫೇಸ್‌ಬುಕ್‌
Published On :

ತಿಂಗಳುಗಳ ಹಿಂದೆ ನೀವು ಫೇಸ್‌ಬುಕ್‌ನಲ್ಲಿ ಖಾತೆ ತೆರೆದಾಗಿನಿಂದ ಇಂದಿನವರೆಗೆ ಏನೆಲ್ಲಾ ಮಾಡಿದ್ರಿ? ನಿಮ್ಮ ಫೇಸ್‌ಬುಕ್ ಪಯಣ ಹೇಗಿತ್ತು? ಎಂಬುದನ್ನು ಮೆಲುಕು ಹಾಕುವ ಫೇಸ್‌ಬುಕ್ ವೀಡಿಯೋ ಮಾಡಿದ್ದು ನೆನಪಿದೆ ತಾನೆ? ಇದೀಗ ಫೇಸ್‌ಬುಕ್, ನಿಮ್ಮ ಫೇಸ್‌ಬುಕ್ ಗೆಳೆಯರಿಗೆ ಥ್ಯಾಂಕ್ಸ್ ಹೇಳಲಿರುವ ವೀಡಿಯೋವೊಂದನ್ನು ಮಾಡಿದ್ದು, ಇದು ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಫೇಸ್‌ಬುಕ್‌ನಲ್ಲಿ ಈ ಸ್ಪೆಷಲ್ ವೀಡಿಯೋ ಆಪ್ಶನ್ ಇಂದು ಆರಂಭವಾಗಿದ್ದು, ನಿಮಗಿಷ್ಟವಾದ ಗೆಳೆಯರಿಗೆ ಥ್ಯಾಂಕ್ಸ್ ಹೇಳುವ ವೀಡಿಯೋವನ್ನು ಕಳುಹಿಸಬಹುದು.

ನೀವು ಮಾಡಬೇಕಾದುದು ಇಷ್ಟೇ
 ಈ  ಲಿಂಕ್ ಕ್ಲಿಕ್ ಮಾಡಿ ಫೇಸ್‌ಬುಕ್‌ ಗೆ ಲಾಗಿನ್ ಆಗಿ. ಎಡಗಡೆ ನಿಮ್ಮ ಸ್ನೇಹಿತರ ಹೆಸರು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗಿಷ್ಟವಾದ ಹೆಸರನ್ನು ಆಯ್ಕೆ ಮಾಡಿ. ಆಗ ನೀವು ಆಯ್ಕೆ ಮಾಡಿದ ಫ್ರೆಂಡ್‌ಗೆ ಥ್ಯಾಂಕ್ಸ್  ಹೇಳುವ ವೀಡಿಯೋ ನಿಮ್ಮ ವಾಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆ ವೀಡಿಯೋಗೆ ನಿಮಗಿಷ್ಟವಾದ ಥೀಮ್, ಫೋಟೋ ಅಥವಾ ನಿಮಗಿಷ್ಟವಾದ ಪೋಸ್ಟ್‌ಗಳನ್ನು ಅಳವಡಿಸಿ ಇನ್ನಷ್ಟು ಸುಂದರವಾಗಿಸಬಹುದು. ವೀಡಿಯೋದಲ್ಲಿ ಕಾಣಿಸಿಕೊಳ್ಳುವ ಫೋಟೋಗಳು ವೀಡಿಯೋ ಕೆಳಗಡೆ ಡಿಸ್‌ಪ್ಲೇ  ಆಗುತ್ತವೆ. ನಿಮಗೆ  ಇಷ್ಟವಾದ ಫೋಟೋವನ್ನು ಸೆಲೆಕ್ಟ್ ಮಾಡಬಹುದು ಇಲ್ಲವೇ ಅನ್‌ಚೆಕ್ ಮಾಡುವ ಮೂಲಕ ಅದನ್ನು ತೆಗೆದು ಇನ್ನೊಂದು ಫೋಟೋ ಹಾಕಬಹುದು.

ಆವಾಗ ವೀಡಿಯೋದ ಪ್ರಿವ್ಯೂ ನಿಮ್ಮ ವಾಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ನಿಮಗಿಷ್ಟವಾದರೆ ಆ ವೀಡಿಯೋವನ್ನು ನಿಮ್ಮ ಟೈಮ್‌ಲೈನ್‌ನಲ್ಲಿ ಶೇರ್ ಮಾಡಿಕೊಳ್ಳಬಹುದು. ನೀವು ಥ್ಯಾಂಕ್ಸ್ ಹೇಳಲು ಆಯ್ಕೆ ಮಾಡಿರುವ ಫ್ರೆಂಡ್‌ನ ಹೆಸರು ಕೂಡಾ ವೀಡಿಯೋದಲ್ಲಿ ಟ್ಯಾಗ್ ಆಗಿರುವುದರಿಂದ ಈ ವೀಡಿಯೋ ಅವರ ಟೈಮ್ ಲೈನ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಇನ್ನೇಕೆ ತಡ, ನಿಮ್ಮ ಫೇಸ್‌ಬುಕ್ ಫ್ರೆಂಡ್‌ಗಳಿಗೂ ವೀಡಿಯೋ ಮೂಲಕ ಥ್ಯಾಂಕ್ಸ್ ಹೇಳಿ...
http://www.facebook.com/thanks

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.