ಮಂಜುಗಡ್ಡೆ ಧೂಮಕೇತುವಿನ ಮೇಲಿಳಿದ ಫೈಲೀ ಲ್ಯಾಂಡರ್
ಯೂರೋಪಿನ ಬಾಹ್ಯಾಕಾಶ ನೌಕೆ ...

ಡರ್ಮ್ ಸ್ಟೆಡ್: ಯೂರೋಪಿನ ಬಾಹ್ಯಾಕಾಶ ನೌಕೆ ಭೂಮಿಯಿಂದ ನೂರಾರು ದಶಲಕ್ಷ ಮೈಲಿ ದೂರವಿರುವ ಮಂಜುಗಡ್ಡೆ, ಧೂಳಿನ ಮೇಲ್ಮೈ ಇರುವ ವೇಗವಾಗಿ ಚಲಿಸುತ್ತಿರುವ ಧೂಮಕೇತುವಿನ ಮೇಲೆ ಫಲಕಾರಿಯಾಗಿ ಇಳಿದಿದೆ. ಇದು ಬ್ರಹ್ಮಾಂಡದ ಉಗಮದ ಬಗ್ಗೆ ಇರುವ ದೊಡ್ಡ ಪ್ರಶ್ನೆಗೆ ಕೆಲವು ಉತ್ತರಗಳನ್ನು ನೀಡಲಿದೆ ಎಂದು ಊಹಿಸಲಾಗಿದೆ.
ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ರೊಸೆಟ್ಟಾ ಬಾಹ್ಯಾಕಾಶ ನೌಕೆ ಫೈಲೀ ಲ್ಯಾಂಡರ್ ಅನ್ನು ಘಂಟೆಗೆ ೪೧೦೦೦ ಮೈಲಿ ಚಲಿಸುತ್ತಿದ್ದ ಧೂಮಕೇತುವಿನ ಮೇಲೆ ಇಳಿಸುವವರೆಗೂ ೭ ಘಂಟೆಗಳ ಉದ್ವೇಗದ ಸಮಯದ ನಂತರ ವಿಜ್ಞಾನಿಗಳು ಸಂಭ್ರಮಿಸಿದ್ದಾರೆ.
ನಂತರ ೧೬೦೩ ಜಿ ಎಂ ಟಿ ಸಮಯಕ್ಕೆ, ೧೦೦ ಕೆ ಜಿ ಯ ಫೈಲೀ ಲ್ಯಾಂಡರ್, ೬೭ಪಿ/ಚುರ್ಯುಮೋವ್-ಜೆರಾಸಿಮೆನ್ಕೋ ಹೆಸರಿನ ಮಂಜುಗಡ್ಡೆ ಮೇಲ್ಮೈನ ಧೋಮಕೇತುವನ್ನು ಸ್ಪರ್ಶಿಸಿದ ನಂತರ ಸಂಜ್ಞೆ ಕಳುಹಿಸಿದೆ.
"ಲ್ಯಾಂಡರ್ ಧೂಮಕೇತುವಿನ ಮೇಲೆ ಇಳಿದಿರುವುದನ್ನ ದೃಢೀಕರಿಸುತ್ತೇವೆ" ಎಂದು ಈ ಯಾನದ ನಿರ್ದೇಶಕ ಆಂಡ್ರಿಯಾ ಅಕ್ಕಮಾಝೊ ತಿಳಿಸಿದ್ದಾರೆ.
ಇನ್ನು ಮುಂದೆ ಸೂರ್ಯನ ಸುತ್ತ ಸುತ್ತಲಿರುವ ಧೂಮಕೇತುವಿನ ಜೊತೆ ಜೊತೆಗೇ ಚಲಿಸಲಿರುವ ರೊಸೆಟ್ಟಾ ಮತ್ತು ಫೈಲೀ, ೨೧ ವಿವಿಧ ಸಾಧನಗಳನ್ನು ಬಳಸಿ, ಈ ಎರಡೂ ಭಾಹ್ಯಾಕಾಶ ಯಂತ್ರಗಳು ಮಾಹಿತಿಯನ್ನು ಕಲೆ ಹಾಕಲಿವೆ. ಈ ಮಾಹಿತಿ ಬ್ರಹ್ಮಾಂಡದ ಉಗಮ, ಭೂಮಿಯ ಮೇಲಿನ ಜೀವ ವೈವಿಧ್ಯದ ಉಗಮದ ಪ್ರಶ್ನೆಗಳನ್ನು ಉತ್ತರಿಸಲಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


