ಇನ್ಮುಂದೆ ವಾಟ್ಸಾಪ್‌ನಲ್ಲಿ ಸಂದೇಶ ನೋಡಿದ್ದಾರೊ ಇಲ್ಲವೊ ಅಂತ ಗೊತ್ತಾಗುತ್ತೆ!
ನಾವು ಇನ್ನೊಬ್ಬರಿಗೆ ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಿದಾಗ ಅದನ್ನು ಅವರು ಆ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೇ?

ನವದೆಹಲಿ: ನಾವು ಇನ್ನೊಬ್ಬರಿಗೆ ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಿದಾಗ ಅದನ್ನು ಅವರು ಆ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೇ? ಎಂಬುದು ಈಗ ತಿಳಿದುಕೊಳ್ಳಬಹುದು. ಇದೀಗ ಅಪ್‌ಡೇಟ್ ಆಗಿರುವ ವಾಟ್ಸಾಪ್ ಆವೃತ್ತಿಯಲ್ಲಿ ಸಂದೇಶ ಕಳುಹಿಸಿದ ಕೂಡಲೇ ಅದನ್ನು ಆ ವ್ಯಕ್ತಿಗಳು ನೋಡಿದ್ದರೆ ಆ ಸಂದೇಶದ ಕೆಳಗೆ ಟಿಕ್ ಮಾರ್ಕ್ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ.
ವಾಟ್ಸಾಪ್‌ನ ಈ ವಿಶೇಷತೆ ಐಓಎಸ್, ಆ್ಯಂಡ್ರಾಯ್ಡ್, ವಿಂಡೋಸ್, ಬ್ಲಾಕ್‌ಬೆರ್ರಿ 10 ಮತ್ತು ಸಿಂಬಿಯನ್ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ.
ಸಂದೇಶವನ್ನು ಓದಿದ್ದಾರೆ ಎನ್ನುವ ಈ ನೋಟಿಫಿಕೇಶನ್ ಕೇವಲ ಪರಸ್ಪರ ವ್ಯಕ್ತಿಗಳಿಬ್ಬರ ನಡುವಿನ ಚಾಟ್‌ನಲ್ಲಿ ಮಾತ್ರವಲ್ಲ ಗ್ರೂಪ್ ಚಾಟ್‌ನಲ್ಲಿಯೂ ಕಾಣಿಸಿಕೊಳ್ಳುತ್ತಿದೆ.
ಅಂದರೆ ಚಾಟಿಂಗ್ ಸಂದೇಶಗಳಲ್ಲಿ ಸಂದೇಶವನ್ನು ಓದಿದ ಕೂಡಲೇ ಡಬಲ್ ಟಿಕ್ ಐಕಾನ್ ನೀಲಿ ಬಣ್ಣಕ್ಕೆ ತಿರುಗುತ್ತದೆ .
ಈ ಹಿಂದೆ ನಾವು ಕಳುಹಿಸಿದ ಸಂದೇಶ ಆ ಕಡೆಯಿರುವ ವ್ಯಕ್ತಿ ಸ್ವೀಕರಿಸಿದ ಕೂಡಲೇ ಡಬಲ್ ಟಿಕ್ ಕಾಣಿಸುತ್ತಿತ್ತು. ಡಬಲ್ ಟಿಕ್ ಆದರೂ ಆ ವ್ಯಕ್ತಿ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೋ ಎಂಬುದು ತಿಳಿಯುತ್ತಿರಲಿಲ್ಲ. ಆದರೆ ಇದೀಗ ವಾಟ್ಸಾಪ್‌ನ ಈ ವಿಶೇಷತೆಯಿಂದಾಗಿ ಲಾಸ್ಟ್ ಸೀನ್ ಹೈಡ್ ಮಾಡಿದ್ದರೂ ವ್ಯಕ್ತಿಗಳು ಸಂದೇಶವನ್ನು ಓದಿದ್ದಾರೋ ಬಿಟ್ಟಿದ್ದಾರೋ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


