ವಿಜ್ಞಾನ-ತಂತ್ರಜ್ಞಾನ

ಜಪಾನ್ ಗಢ ಗಢ

Published On :

ಈ ಪ್ರಶ್ನೆಗೆ ಉತ್ತರಿಸೋದು ಕಷ್ಟದ ಕೆಲಸವೇ ಬಿಡಿ. ಮಾನವ ನಿತ್ಯವೂ ಒಂದಲ್ಲಾ ಒಂದು ಅವಘಡಕ್ಕೆ ತುತ್ತಾಗುತ್ತಲೇ ಇದ್ದಾನೆ. ಮೊನ್ನೆ ಮೊನ್ನೆಯಷ್ಟೇ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪವನ್ನು ನಾವಿನ್ನೂ ಮರೆತೇ ಇಲ್ಲ. ಅದಾಗಲೇ ಮತ್ತೊಮ್ಮೆ ಜಪಾನ್‌ನಲ್ಲೇ ಭಾರಿ ಪ್ರಮಾಣದ ಭೂಕಂಪ ಸಂಭವಿಸಲಿದೆ ಎಂದು ಭೂಗರ್ಭಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ.
ರಿಕ್ಟರ್ ಮಾಪಕದಲ್ಲಿ 9ರಷ್ಟು ತೀವ್ರತೆಯೊಂದಿಗೆ ಈ ಭೂಕಂಪ ಸಂಭವಿಸಲಿದೆ ಎಂಬುದು ಅವರ ಸಂಶೋಧನೆಯ ತಿರುಳು. ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ಸಂಶೋಧಕರು ಜಪಾನ್ ಸದ್ಯದಲ್ಲೇ ಮತ್ತೊಂದು ಭೀಕರ ಭೂಕಂಪಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ,
ಕಳೆದ 30 ವರ್ಷಗಳಿಂದ ಸಂಭವಿಸಿದ ಭೂಕಂಪಗಳು ಮತ್ತು ಭೂಮಿಯ ಗುಣಲಕ್ಷಣಗಳನ್ನು ಅವಲೋಕಿಸಿ ಈ ವರದಿ ನೀಡಿದ್ದಾರೆ. ಅದರಂತೆ ಜಪಾನ್, ಚಿಲಿ, ಸುಮಾತ್ರ ಮತ್ತು ಅಲಾಸ್ಕಗಳಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.