ವಿಜ್ಞಾನ-ತಂತ್ರಜ್ಞಾನ

ಗಿಡದಲ್ಲೇ ಬಂಗಾರ ಬೆಳೆಯುವಂತಿದ್ದರೆ!?

Published On :

ದುಡ್ಡೇನೂ ಗಿಡದಲ್ಲಿ ಬಿಡುತ್ತಾ?- ಈ ಮಾತನ್ನು ಬಹಳಷ್ಟು ಜನ ಜೀವನದಲ್ಲಿ ಅದೆಷ್ಟು ಬಾರಿ ಆಡಿರುತ್ತಾರೋ ಅಥವಾ ಕೇಳಿಸಿಕೊಂಡಿರುತ್ತಾರೋ? ಹೋಗ್ಲಿ ಬಿಡಿ ಇದು ಸತ್ಯಕ್ಕೆ ಹತ್ತಿರವಾದ ವಿಚಾರವೇ ಅಲ್ಲ. ಆದರೆ ಬಂಗಾರವೇ ಗಿಡದಲ್ಲಿ ಬಿಡುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ಲವೇ? ಹೌದು, ಅಚ್ಚರಿ ಎನ್ನಿಸಿದರೂ ಇದು ಸತ್ಯ. ವಿಜ್ಞಾನಿಗಳು ಇಂಥದ್ದೊಂದು ಗಿಡ ಕಂಡುಹಿಡಿದಿದ್ದಾರೆ. ಫಿಟೋಮಿನಿಂಗ್ ಎಂಬ ತಂತ್ರಜ್ಞಾನದ ಮೂಲಕ ಗಿಡಗಳಲ್ಲೇ ಬಂಗಾರ ತೆಗೆಯಬಹುದು ಎಂದು ಹೇಳುತ್ತಾರೆ. ಇವರು ಹೇಳುವ ಪ್ರಕಾರ, ಗಿಡಗಳಿಗೆ ತಮ್ಮ ಕಾಂಡಗಳು ಮತ್ತು ಬೇರುಗಳ ಮೂಲಕ ಕೆಲವೊಂದು ಖನಿಜಗಳನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಇದೇ ವಾದವನ್ನು ಇಟ್ಟುಕೊಂಡು ಗಿಡಗಳನ್ನು ಬೆಳೆದರೆ ಇಂಥ ಗಿಡಗಳು ಮಣ್ಣಿನಲ್ಲಿರುವ ಚಿನ್ನವನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ.  ಇದಕ್ಕಾಗಿ ತ್ವರಿತವಾಗಿ ಬೆಳೆಯುವ ಗಿಡಗಳನ್ನು ಆರಿಸಿಕೊಳ್ಳಬೇಕು ಎನ್ನುವ ಸಂಶೋಧಕರು, ಬಂಗಾರವನ್ನು ತೆಗೆಯಬೇಕಾದರೆ ಕೆಲವು ರಾಸಾಯನಿಕಗಳನ್ನೂ ಬಳಕೆ ಮಾಡಬೇಕು ಎನ್ನುತ್ತಾರೆ. ಆದರೆ ಗಿಡದಿಂದ ಬಂಗಾರ ತೆಗೆಯುವುದು ಕಷ್ಟವಾದ ವಿಚಾರ, ಬಹು ನಾಜೂಕಿನಿಂದ ಕೆಲಸ ಮಾಡಬೇಕು ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.