ಗಾಳಿ ಸಂದೇಶ!
ಸಂದೇಶ... ಮೇಘ ಸಂದೇಶ... ಪ್ರೇಮ ಸಂದೇಶ...
1970ರ ದಶಕದಲ್ಲೇ ಕನ್ನಡದ ಖ್ಯಾತ ಗಾಯಕಿ ಸುಶೀಲಾ ಅವರು ಈ ಹಾಡನ್ನು ಹೇಳಿದ್ದರು. ಮೋಡಗಳ ಮೂಲಕವೇ ಪ್ರೇಮ ಸಂದೇಶಗಳನ್ನು ಕಳಿಸುವ ಕಲ್ಪನೆ ಮಾಡಿದ್ದರು. ಈಗ ಜರ್ಮನಿಯ ವಿಜ್ಞಾನಿಯೊಬ್ಬರು ಗಾಳಿಯಲ್ಲಿಯೇ ಸಂದೇಶಗಳನ್ನು ಬರೆದು ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಗಾಳಿಯಲ್ಲಿ ನೀವು ಗೀಚಿದ ಅಕ್ಷರಗಳು ಇ-ಮೇಲ್ ಅಥವಾ ಚಾಟ್ ಬಾಕ್ಸ್‌ನಲ್ಲಿನ ಸಂದೇಶವಾಗಿ ಮಾರ್ಪಡಬಲ್ಲದು. ಈ ತಂತ್ರಾಂಶವು ಸುಮಾರು 8 ಸಾವಿರ ಅಕ್ಷರಗಳನ್ನು ಗುರುತಿಸಬಲ್ಲದು. ಹಾಗಾಗಿ ಇನ್ನು ಕಲ್ಪನೆಗಾಗಿಯೂ ಗಾಳಿಯಲ್ಲಿಯೂ ಗೀಚುವಂತಿಲ್ಲ!
ಜರ್ಮನಿಯ ಕ್ರಿಸ್ಟೋಫ್ ಆಮ್ ಎಂಬ ವಿಜ್ಞಾನಿ ಕಂಡುಹಿಡಿದಿರುವ ಗ್ಲೌಸ್ ಟಚ್ ಸ್ಕ್ರೀನ್ ಯುಗದಿಂದ 'ಏರ್ ಸ್ಕ್ರೀನ್' ಯುಗಕ್ಕೆ ಕೊಂಡೊಯ್ಯುವ ಸೂಚನೆ ನೀಡಿದೆ. ಗ್ಲೌಸ್‌ನಲ್ಲಿನ ಸೆನ್ಸಾರ್ ತಂತ್ರಜ್ಞಾನವು ಈ ಅಕ್ಷರಗಳನ್ನು ಗುರುತು ಹಿಡಿಯಲಿದೆ.
ಗ್ಲೌಸ್ ಧರಿಸಿದ ವ್ಯಕ್ತಿಯು ಗಾಳಿಯಲ್ಲಿ ಏನಾದರು ಬರೆದರೆ ಅದು ಕೋಡಿಂಗ್ ತಂತ್ರಜ್ಞಾನದ ಮೂಲಕ ಡಿವೈಸ್‌ಗೆ ಬರುತ್ತದೆ. ಅಲ್ಲಿ ಬಳಕೆದಾರರು ಸೂಚಿಸಿದ ವಾಹಕದ ಮೂಲಕ ಸಂದೇಶ ರವಾನೆಯಾಗುತ್ತದೆ. ಈ ತಂತ್ರಜ್ಞಾನವು ಸದ್ಯಕ್ಕೆ ಹ್ಯಾಂಡ್ ಗ್ಲೌಸ್‌ಗೆ ಸೀಮಿತವಾಗಿದೆ. ಇದನ್ನು ಸ್ಮಾರ್ಟ್‌ಫೋನ್‌ನಲ್ಲಿಯೂ ಬಳಸುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
ಸ್ಮಾರ್ಟ್‌ಫೋನ್‌ನಲ್ಲಿ ಇದೇ ಸೆನ್ಸಾರ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಸ್ಮಾರ್ಟ್‌ಫೋನ್ ಡಿವೈಸ್ ಸಂಖ್ಯೆ ಹೆಚ್ಚಾದಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

