ಟೆಕ್ಸ್ಟ್ ನೆಕ್!
ಮೊಬೈಲ್, ಟ್ಯಾಬ್ಲೆಟ್ ಅಥವಾ ಎಂಪಿ-3 ಪ್ಲೇಯರ್‌ಗಳನ್ನು ಅತಿಯಾಗಿ ಬಳಸುವ ಚಾಳಿಯದ್ದರೆ ಎಚ್ಚರದಿಂದಿರಿ.
ಇವುಗಳ ಅತಿಯಾದ ಬಳಕೆಯಿದ ಟೆಕ್ಸ್ಟ್ ನೆಕ್ ಎಂಬ ರೋಗ (ಕತ್ತು ನೋವು) ಬರಬಹುದು. ಸಂದೇಶ ಕಳುಹಿಸುವುದರಲ್ಲಿ, ಹಾಡು ಕೇಳುವುದರಲ್ಲಿ ಅಥವಾ ಟ್ಯಾಬ್ಲೆಟ್‌ನಲ್ಲಿ ಅತಿಯಾಗಿ ಚಾಟ್ ಮಾಡುವ ಚಟವಿದ್ದರೆ ಬದಲಿಸಿಕೊಳ್ಳಿ, ಇಲ್ಲವಾದಲ್ಲಿ ಅಲ್ಪ ವಿರಾಮ ನೀಡಿ ಮುಂದುವರಿಸಿ. ಇದರಿಂದ ಕತ್ತು, ಭುಜ ಹಾಗೂ ಬೆನ್ನು ಹುರಿಯ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಇದರಿಂದ ಭವಿಷ್ಯದಲ್ಲಿ ವಿಪರೀತ ಕತ್ತು ನೋವಿನಿಂದ ಬಳಲುವ ಅಪಾಯವಿದೆ. ಫ್ಲೋರಿಡಾದ ವೈದ್ಯರೊಬ್ಬರು ಇದನ್ನು 'ಟೆಕ್ಸ್ಟ್ ನೆಕ್' ಎಂದು ವ್ಯಾಖ್ಯಾನಿಸಿದ್ದಾರೆ. ಮೊಬೈಲ್, ಟ್ಯಾಬ್ಲೆಟ್ ಅಥವಾ ಎಂಪಿ-3 ಪ್ಲೇಯರ್‌ಗಳಲ್ಲಿ ಮುಳುಗಿಕೊಂಡಾಗ ನಮ್ಮ ಕತ್ತು ಅಸಹಜವಾಗಿರುತ್ತದೆ. ಇದರಿಂದ ನಮ್ಮ ಗಮನಕ್ಕೇ ಬಾರದೇ ದೇಹದ ಇತರೆ ಭಾಗಗಳ ಮೇಲೆ ಒತ್ತಡ ಬೀಳುತ್ತದೆ. ಆಗಾಗ ಇದಕ್ಕೆ ಬಿಡುವು ನೀಡಿ ಕತ್ತಿಗೆ ವಿಶ್ರಾಂತಿ ನೀಡುವುದು ಉತ್ತಮ.
ಈ ಅಭ್ಯಾಸವನ್ನು ಬದಲಿಸಿಕೊಳ್ಳದಿದ್ದರೆ ನೀವು ಎಂದೆಂದಿಗೂ 'ತಲೆ ಬಗ್ಗಿಸಿಯೇ' ನಡೆಯಬೇಕಾಗುತ್ತದೆ, ಹುಷಾರ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

