Earth ಶಾಸ್ತ್ರ

ಭೂಮಿ ಮೊದಲು ಹೀಗೇ ಇತ್ತಾ? ಏಷ್ಯಾ, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ, ಆಫ್ರಿಕ... ಹೀಗೆ ಖಂಡಗಳಾಗಿ ಭಾಗವಾಗಿತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ವಿಜ್ಞಾನ ಉತ್ತರ ಕೊಟ್ಟಿದೆ ಬಿಡಿ. ಆದರೆ ಈ ಖಂಡಗಳಿಗೆ ದೇಶಗಳು ಸೇರಿದ್ದು ಯಾವಾಗ ಎಂಬ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಭೂವಿಜ್ಞಾನಿಗಳ ಪ್ರಕಾರ ಮೊದಲು ವಿಶ್ವವು ಅಖಂಡವಾಗಿತ್ತು. ಭೂ ಚಲನೆಯಿಂದ ಎಲ್ಲವೂ ಖಂಡ ಖಂಡಗಳಾಗಿ, ಉಪ ಖಂಡಗಳಾಗಿ ಪರಿವರ್ತನೆ ಹೊಂದುತ್ತಾ ಸಾಗಿದವು. ಹೀಗಾಗಿ ಎಲ್ಲ ಪ್ರದೇಶವೂ ಪ್ರತ್ಯೇಕವಾಗುತ್ತಾ ಸಾಗಿದವು. ಹಾಗಾದರೆ ಭಾರತ ಮೊದಲು ಎಲ್ಲಿತ್ತು? ಅದು ಏಷ್ಯಾ ಖಂಡಕ್ಕೆ ಸೇರಿದ್ದು ಯಾವಾಗ? ಎಂಬ ಪ್ರಶ್ನೆ ಹುಟ್ಟುವುದು ಸಹಜ.
ಈ ಪ್ರಶ್ನೆಗೆ ಸಾಮಾನ್ಯವಾಗಿ ಸಿಗುವ, ಕೊಡುವ ಉತ್ತರ 50 ಮಿಲಿಯನ್ ವರ್ಷಗಳ ಹಿಂದೆ. ಇದು ಆಗಿನ ಸಂಶೋಧನೆಗಳು ಹೇಳಿದ್ದು. ಇದನ್ನೇ ಎಲ್ಲರೂ ಹೇಳುತ್ತಿದ್ದರು. ಆದರೆ ಈಗಿನ ಸಂಶೋಧನೆ ಹೇಳುವುದೇನೆಂದರೆ, ಇದು ಆಗಿನ ಗ್ರೇಟರ್ ಇಂಡಿಯಾವು (ಪುರಾತನ ಭಾರತ) ಏಷ್ಯಾ ಖಂಡಕ್ಕೆ ಸೇರಿದ್ದು 50 ಮಿಲಿಯನ್ ವರ್ಷಗಳ ಹಿಂದಲ್ಲ. 40 ಮಿಲಿಯನ್ ವರ್ಷಗಳ ಹಿಂದೆ ಎಂದು!
ಹೌದು. ಎಂಐಟಿ ಭೂ ಇಲಾಖೆಯ ಜಿಯೋಲಜಿ ಸಹಾಯಕ ಪ್ರೊಫೆಸರ್ ಓಲಿವರ್ ಜಗೋಡ್ಸ್ ಹೇಳಿದ ಸತ್ಯ ಇದು.
ಭೂಮಿ ನಿರಂತರ ಚಲನೆಯಲ್ಲಿರುವುದರಿಂದ ಪ್ರತಿದಿನ ಇದರ ಕಾರ್ಯಚಟುವಟಿಕೆ ನಡೆಯುತ್ತಲೇ ಇರುತ್ತದೆ. ಹೀಗಾಗಿ 90 ಮಿಲಿಯನ್ ವರ್ಷಗಳ ಹಿಂದೆ ಗೋಡ್ವಾನಾ ಹಾಗೂ ಮಡಗಾಸ್ಕರ್ ಜತೆ ಇದ್ದ ಭಾರತ ಭೂರಚನಾ ಪ್ಲೇಟ್ (ಭೂಕವಚದ ಪದರ) ಅಲ್ಲಿಂದ ಉತ್ತರಕ್ಕೆ ಚಲಿಸಲು ಪ್ರಾರಂಭಿಸಿತು. ಅದು ಏಷ್ಯಾ ಖಂಡಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಭಾರತವು ಏಷ್ಯಾ ಖಂಡಕ್ಕೆ ಸೇರಿದೆ. ಇದು 50 ಮಿಲಿಯನ್ ವರ್ಷಗಳ ಹಿಂದೆ ಆದದ್ದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಹೀಗೆ ಗ್ರೇಟರ್ ಇಂಡಿಯಾ ಡಿಕ್ಕಿ ಹೊಡೆದಿದ್ದು ಯುರೇಷಿಯನ್ ಪ್ಲೇಟ್ಗೆ. ಈ ಸಂದರ್ಭದಲ್ಲಿ ಯುರೇಷಿಯನ್ ಪ್ಲೇಟ್ ಎಂದರೆ ಅದರ ಭೂಭಾಗದ ಅಡಿಗೆ ಭಾರತದ ಪ್ಲೇಟ್ ಸೇರಿಹೋಗಿದೆ. ಆಗ ಭಾರತದ ಒಂದಷ್ಟು ಭೂಮಿ ಏಷ್ಯಾ ಖಂಡದೊಳಗೆ ಹುದುಗಿ ಹೋಗಿತ್ತು. ಆದರೆ, ಇದು ಎಷ್ಟು ಭಾಗ ಎಂಬುದು ಸಂಶೋಧನೆಯಿಂದಷ್ಟೇ ತಿಳಿದುಬರಬೇಕಿದೆ.
ಈಗ ಓಲಿವರ್ ಹೇಳುವುದೇನೆಂದರೆ, ಭಾರತದ ವಿಸ್ತೀರ್ಣ ಈ ಹಿಂದೆ ವಿಸ್ತಾರವಾಗಿತ್ತು ಎಂಬುದು ಸುಳ್ಳು. ಗ್ರೇಟರ್ ಇಂಡಿಯಾವು ಯುರೇಷ್ಯಾಕ್ಕೆ ಡಿಕ್ಕಿ ಹೊಡೆಯುವ ಮೊದಲು ಒಂದು ಪುಟ್ಟ ದ್ವೀಪಕ್ಕೆ ಡಿಕ್ಕಿ ಹೊಡೆದಿದೆ. ನಂತರ ಅದರ ಸಮೇತ ಬಂದು ಏಷ್ಯಾ ಖಂಡಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ದ್ವೀಪ ಅಪ್ಪಚ್ಚಿಯಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಈ ಭೂ ಒತ್ತಡ ಹೆಚ್ಚಾಗುತ್ತಿರುವುದರಿಂದ ದೇಶದ ಗಡಿಭಾಗವಾದ ಹಿಮಾಲಯ ಸಹ ದಿನದಿಂದ ದಿನಕ್ಕೆ ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಲಿದೆ. ಇದು ಭೂ ಭಾಗವನ್ನು ಸ್ವಲ್ಪ ಸ್ವಲ್ಪವೇ ಆಕ್ರಮಿಸಿಕೊಳ್ಳುತ್ತದೆ ಎಂಬುದೂ ಅಷ್ಟೇ ಸತ್ಯವಾಗಿದೆ ಎಂದು ವಿಜ್ಞಾನ ಹೇಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


