ಮೈಕ್ರೋಸಾಫ್ಟ್ ಜಾಣನಡೆ

ಆ್ಯಪಲ್ ಸಂಸ್ಥೆ ಗೂಗಲ್‌ನೊಂದಿಗೆ ಕಿತ್ತಾಟಕ್ಕೆ ಇಳಿದ್ದರೆ, ಇತ್ತ ವಿಂಡೋಸ್ ಸಂಸ್ಥೆ ಕೇವಲ ಒಂದು ಮನವಿ ಪತ್ರದ ಮೂಲಕ ಗೂಗಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ವಿಂಡೋಸ್ 8 ಆಪರೇಟಿಂಗ್ ಸಿಸ್ಟಂನಲ್ಲಿ ಆ್ಯಕ್ಟೀವ್ ಸಿಂಕ್ ಎಂಬ ಆಯ್ಕೆಯಿದೆ. ಇದರ ಮೂಲಕ ವಿಂಡೋಸ್ 8 ಬಳಕೆದಾರರು ಜಿಮೇಲ್‌ಗೆ ಬರುವ ಮೇಲ್‌ಗಳನ್ನು ಪಡೆಯಬಹುದಿತ್ತು. ಆದರೆ ಈ ಆ್ಯಕ್ಟೀವ್ ಸಿಂಕ್ ಬೆಂಬಲವನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಹೇಳಿತ್ತು. ಹಾಗೆಯೇ ವಿಂಡೋಸ್ 8 ಗಾಗಿ ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಕೂಡ ನಿರ್ಮಿಸುವುದಿಲ್ಲ ಎಂದು ಗೂಗಲ್ ಹೇಳಿತ್ತು. ಇದು ವಿಂಡೋಸ್ 8 ಕಂಪ್ಯೂಟರ್ ಮತ್ತು ಮೊಬೈಲ್ ಹೊಂದಿರುವ ಜಿಮೇಲ್ ಗ್ರಾಹಕರಿಗೆ ಆತಂಕ ಸೃಷ್ಟಿಸಿತ್ತು. ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಲಭ್ಯವಿರುವುದರಿಂದ ಆ್ಯಪಲ್ ಗ್ರಾಹಕರಿಗೆ ಇದರಿಂದ ಯಾವ ತೊಂದರೆಯೂ ಇರಲಿಲ್ಲ.
ಆದರೆ ಆ್ಯಕ್ಟೀವ್ ಸಿಂಕ್ ವ್ಯವಸ್ಥೆಯನ್ನು ಕೊಂಚ ದಿನ ಮುಂದುವರಿಸುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಗೂಗಲ್‌ಗೆ ಪತ್ರ ಬರೆದಿತ್ತು. ಈ ಪತ್ರವನ್ನು ಗೌರವಿಸುವುದಾಗಿ ಹೇಳಿರುವ ಗೂಗಲ್, ಆ್ಯಕ್ಟೀವ್ ಸಿಂಕ್‌ಗೆ ನೀಡುವ ಬೆಂಬಲವನ್ನು ಸ್ವಲ್ಪ ಸಮಯದವರೆಗೆ ಮುಂದುವರಿಸುವುದಾಗಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


