ಮುಖ ತೊಳ್ಕೊಳಿ, ಪೌಡರ್ ಹಚ್ಕೊಳಿ...

ಸದಾ ನಿಮ್ಮ ಮುಖಕ್ಕೆ ಮಸಿ ಬಳಿಯಲು ಯಾರಾದರೂ ಕೊಯ್ಕೊಂಡು ಇರ್ತಾರೆ. ನಿಜ ಜೀವನದಲ್ಲೂ ಅಷ್ಟೇ. ಸಾಮಾಜಿಕ ತಾಣದಲ್ಲಾದರೂ ಅಷ್ಟೇ. ನೀವು ಯಾರಿಗೇನು ಅನ್ಯಾಯ ಮಾಡದಿದ್ದರೂ ನಿಮ್ಮ ಮುಖಕ್ಕೆ ಮಸಿ ಬಳಿಯಲು ಹಿತಶತ್ರುಗಳಂತಿರುವ, ನಿಮ್ಮದೇ ಫ್ರೆಂಡ್ಸ್ ಲಿಸ್ಟ್‌ನಲ್ಲಿರುವ ಕೆಲವರು ಕಾಯುತ್ತಿರುತ್ತಾರೆ. ಸಾಮಾಜಿಕ ತಾಣಗಳಲ್ಲಿ ಇಂತಹ 'ಮಸಿ' ಮನಸ್ಸಿನ ಮಂದಿ ಹೆಚ್ಚಿದ್ದಾರೆ.
ನಿಮಗೇ ಗೊತ್ತಿಲ್ಲದಂತೆ ನಿಮ್ಮ ಫೇಸ್‌ಗೆ ಮಸಿಬಳಿಯುವ ಅಂತಹ ಯತ್ನ ಮಾಡುವ ಹಿತಶತ್ರುಗಳಿಂದ ಕಾಪಾಡಲೆಂದೇ ಫೇಸ್‌ಬುಕ್ ಫೇಸ್‌ವಾಶ್ ಎಂಬ ಅಪ್ಲಿಕೇಶನ್ ತಂದಿದೆ. ಬೇಗ ಬೇಗ ಮುಖ ತೊಳ್ಕೊಳಿ, ಪೌಡರ್ ಹಚ್ಕೊಳಿ... ನಿಮ್ಮ ಫೇಸ್ ಕ್ಲೀನ್ ಮಾಡ್ಕೊಳಿ...
ಫೇಸ್‌ವಾಶ್ ಅಪ್ಲಿಕೇಶನ್ ಅಳವಡಿಸಿಕೊಂಡರೆ ಅದು ನಿಮ್ಮ ಪೋಸ್ಟ್, ಟೈಮ್‌ಲೈನ್, ಟ್ಯಾಗ್ಡ್ ಫೋಟೋಗಳನ್ನು ಸ್ಕ್ಯಾನ್ ಮಾಡುತ್ತದೆ. ನಿಮ್ಮ ಮುಖ ಸ್ವಚ್ಛವಾಗಿದೆಯೇ ಇಲ್ಲವೇ ಎಂಬುದನ್ನು ಅಳೆಯಲು ಅಪ್ಲಿಕೇಶನ್ ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಇದರ ಜತೆಗೆ ನೀವು ನಿಮ್ಮ ಪ್ರೊಫೈಲ್‌ನಲ್ಲಿ ನಿಮಗೆ ಬೇಡವಾದ ಶಬ್ದ ಇದೆಯೇ ಎಂಬುದನ್ನು ಕೂಡ ಹುಡುಕಿ, ಡಿಲೀಟ್ ಮಾಡಬಹುದು. ಕೆಂಟ್ ವಿಶ್ವವಿದ್ಯಾಲಯದ ಮೂರು ವಿದ್ಯಾರ್ಥಿಗಳು ರೂಪಿಸಿರುವ ಈ ಅಪ್ಲಿಕೇಶನ್‌ನಲ್ಲಿ 'ಕೆಟ್ಟ ಶಬ್ದ'ಗಳ ಪಟ್ಟಿಯೂ ಇದೆ. ಅಂತಹ ಶಬ್ದಗಳು ಕಂಡು ಬಂದಲ್ಲಿಯೂ ಅದು ನಿಮ್ಮನ್ನು ಎಚ್ಚರಿಸುತ್ತದೆ. ನಿಮ್ಮ ಟೈಮ್‌ಲೈನ್, ಟ್ಯಾಗ್ ಆದ ಫೋಟೊ ಹೀಗೆ ಪ್ರತಿಯೊಂದನ್ನೂ ಸ್ಕ್ಯಾನ್ ಮಾಡುವ ಈ ಅಪ್ಲಿಕೇಶನ್ ಅದರಲ್ಲಿ 'ಸ್ವಚ್ಛವಲ್ಲದ' ಅಂಶಗಳು ಅಥವಾ ನಿಮ್ಮ ಫೇಸ್‌ಗೆ ಮಸಿಬಳಿಯುವ ಅಂಶಗಳು ಕಂಡುಬಂದಲ್ಲಿ ನಿಮ್ಮ ಗಮನಕ್ಕೆ ತರುತ್ತದೆ.
ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಸ್ವಚ್ಛವಾಗಿಡಲು ನಿಮಗೆ ಸ್ವಲ್ಪಾದರೂ ಸಹಾಯವಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


