ತಪ್ಪು ಬರೆದರೆ ನಡುಗುವ ಪೆನ್

ಇಟ್ಟರೆ ಸಾಕು ಬರೆದುಕೊಂಡು ಹೋಗುವ ಪೆನ್ ಇದ್ದರೆ ಎಷ್ಟು ಚೆನ್ನ ಅಂತ ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ ಅಂದುಕೊಂಡಿರುತ್ತಾರೆ. ಅಂತಹ ಪೆನ್ ಇನ್ನೂ ಬಂದಿಲ್ಲ. ಆದರೆ ಬರೆಯುವಾಗ ನೀವು ತಪ್ಪು ಮಾಡಿದಲ್ಲಿ, ತಪ್ಪಾದ ಸ್ಪೆಲ್ಲಿಂಗ್ ಬರೆದಲ್ಲಿ ವೈಬ್ರೇಟ್ ಆಗುವ ಮೂಲಕ ನಿಮ್ಮನ್ನು ಎಚ್ಚರಿಸುವ ಪೆನ್ ಕಂಡುಹಿಡಿಯಲಾಗಿದೆ!
ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವುದರಿಂದ ಹಾಗೂ ಸಾಕಷ್ಟು ಮಂದಿ 'ಸ್ಪೆಲ್‌ಚೆಕ್' ಮತ್ತು ಮೊಬೈಲ್‌ಗಳಲ್ಲಿ 'ಆಟೋ ಕರೆಕ್ಟ್' ಆಯ್ಕೆಗಳು ಲಭ್ಯವಿದೆ. ಬರೆಯುವಾಗ ಸ್ಪೆಲ್ಲಿಂಗ್ ಸರಿ ಇಲ್ಲದಿದ್ದರೂ ತನ್ನಿಂದ ತಾನೇ ಸರಿಯಾದ ಸ್ಪೆಲ್ಲಿಂಗ್ ಅಳವಡಿಸುವ ಸಾಮರ್ಥ್ಯ ಈಗಿನ ಸಾಧನಗಳಿಗಿದೆ. ಇದರ ಮೇಲೆ ಮಿತಿಮೀರಿ ಅವಲಂಬಿತವಾಗಿರುವ ಜನರಿಗೆ ಪೇಪರ್ ಮೇಲೆ ಬರೆಯುವುದು ಕಷ್ಟವಾಗಬಹುದು. ಅದಕ್ಕೆಂದೇ ಜರ್ಮನಿಯ ಕಂಪನಿಯೊಂದು ಇಂತಹ ಪೆನ್ ಕಂಡುಹಿಡಿದಿದೆ. ತನ್ನ ಮಗ ತಪ್ಪು ಬರೆಯುತ್ತಿದ್ದುದನ್ನು ತಿದ್ದಿ, ತಿದ್ದಿ, ಅದಕ್ಕಾಗಿಯೇ ಒಂದು ಪೆನ್ ಯಾಕೆ ತಯಾರಿಸಬಾರದು ಎಂಬ ಯೊಚನೆ ಬಂತಂತೆ ಅವರಿಗೆ. ಮುಂದೆ ಈ ಪೆನ್‌ಗೆ ಕಂಪ್ಯೂಟರ್ ಸಂಪರ್ಕ, ಇದಕ್ಕಾಗಿಯೇ ಒಂದು ಅಪ್ಲಿಕೇಶನ್ ಕೂಡ ತಯಾರಿಸುವ ಯೋಚನೆ ಇದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


