ವಿಜ್ಞಾನ-ತಂತ್ರಜ್ಞಾನ

ಹೋಂಗಾಗಿ ಪೈಪೋಟಿ

Published On :

ಈ ಜಗಳ ವಾಸಿಸುವ ಹೋಂ (ಮನೆ)ಗಾಗಿ ಅಲ್ಲ. ಮೊಬೈಲ್‌ನ ಹೋಂಗಾಗಿ!
ಎಲ್ಲ ಮೊಬೈಲ್‌ನಲ್ಲೂ ಹೋಂ ಸ್ಕ್ರೀನ್ ಇದ್ದೇ ಇರುತ್ತದೆ. ಆದರೆ ಫೇಸ್‌ಬುಕ್ ಸಂಸ್ಥೆ ಹೊಸದಾಗಿ ಫೇಸ್‌ಬುಕ್ ಹೋಂ ಎಂಬ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಇದು ನಿಮ್ಮ ಮೊಬೈಲ್‌ನ ಹೋಂ ಸ್ಕ್ರೀನನ್ನು ನಿಯಂತ್ರಿಸಬಲ್ಲದು. ನಿಮಗೆ ಬೇಕಾದಂತೆ ಬದಲಾಯಿಸಬಲ್ಲದು.
ಕೆಲವು ಸಾಮಾಜಿಕ ತಾಣಗಳ ಗೊಂಚಲಿನಂತಿರುವ ಹೋಂ ಅಪ್ಲಿಕೇಶನ್, ಆ ಸಾಮಾಜಿಕ ತಾಣಗಳ ಮಾಹಿತಿಗಳನ್ನು ನಿಮ್ಮ ಹೋಂ ಸ್ಕ್ರೀನ್‌ನಲ್ಲಿ ತೋರಿಸುತ್ತದೆ. ಫೇಸ್‌ಬುಕ್ ಚಾಟ್ ಅಥವಾ ಫೋಟೋಗಳನ್ನು ಈ ಅಪ್ಲಿಕೇಶನ್ ಮೂಲಕ ನಿಮ್ಮ ಮೊಬೈಲ್ ಹೋಂ ಸ್ಕ್ರೀನ್‌ಗೆ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದು ಮೊಬೈಲ್‌ನಲ್ಲಿರುವ ಸಾಫ್ಟ್‌ವೇರ್‌ನ ಹೋಂ ಸ್ಕ್ರೀನ್ ಬದಲಿಗೆ ಬೇರೊಂದು ಹೋಂ ಸ್ಕ್ರೀನ್ ಅಳವಡಿಸಲು ಅವಕಾಶ ನೀಡುತ್ತದೆ. ಸಾಮಾಜಿಕ ತಾಣಗಳ ಫೀಡ್‌ಗಳೇ ನಿಮ್ಮ ಹೋಂ ಸ್ಕ್ರೀನ್ ಆಗಿ ಪರಿವರ್ತನೆಯಾಗಬಲ್ಲದು.
ಇದು ಮೊಬೈಲ್ ಆಪರೇಟಿಂಗ್ ಸಿಸ್ಟಂ ಮತ್ತು ಹೋಂ ಅಪ್ಲಿಕೇಶನ್ ನಡುವೆ ಮೊಬೈಲ್ ಹೋಂ ಸ್ಕ್ರೀನ್‌ಗಾಗಿ ಪೈಪೋಟಿ ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.