'PayTM ಅಂದ್ರೆ ಪೇ ಟು ಮೋದಿ ಎಂದರ್ಥ; 10 ವರ್ಷದ ಹಿಂದೆಯೇ ರಾಹುಲ್ ಗಾಂಧಿ ಎಚ್ಚರಿಸಿದ್ದರು'
2016ರಲ್ಲಿ UPI ಪಾವತಿಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಅಜಯ್ ಸಿಂಗ್ ಅವರು, ರಾಹುಲ್ ಗಾಂಧಿ ಅವರು 10 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಈಗ ಸಾಬೀತು ಮಾಡಿದೆ ಎಂದರು.

ರಾಯಚೂರು: ಎರಡು ಸಾವಿರ ರೂ.ಗಳ ಮೇಲಿನ UPI ಪಾವತಿಗೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಅವರು, ಪೇಟಿಎಂ ಎಂದ್ರೆ ಪೇ ಟು ಮೋದಿ ಎಂದರ್ಥ. 10 ವರ್ಷದ ಹಿಂದೆಯೇ ರಾಹುಲ್ ಗಾಂಧಿ ಎಚ್ಚರಿಸಿದ್ದರು ಎಂದು ಗುರುವಾರ ಹೇಳಿದ್ದಾರೆ.
2016ರಲ್ಲಿ UPI ಪಾವತಿಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಅಜಯ್ ಸಿಂಗ್ ಅವರು, ರಾಹುಲ್ ಗಾಂಧಿ ಅವರು 10 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಈಗ ಸಾಬೀತು ಮಾಡಿದೆ ಎಂದರು.
2016ರ ಡಿಸೆಂಬರ್ 8ರಂದು ರಾಹುಲ್ ಗಾಂಧಿ, ನಗದುರಹಿತ ಆರ್ಥಿಕತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ವೇಳೆ “PayTM means Pay To Modi” ಎಂದು ಹೇಳಿದ್ದರು. ನೋಟು ಅಮಾನ್ಯೀಕರಣದಿಂದ ಕೆಲವು ಜನರು ಮತ್ತು ಸಂಸ್ಥೆಗಳು ಹೆಚ್ಚಿನ ಲಾಭ ಪಡೆಯಲಿವೆ ಎಂದು ಆರೋಪಿಸಿದ್ದರು.
ಇಂದು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ್ ಸಿಂಗ್, ಮೋದಿಯವರು 75 ವರ್ಷಕ್ಕೆ ನಿವೃತ್ತಿ ತಗೋಬೇಕು. ಅವರೇ 75 ದಾಟಿದವರನ್ನು ನಿವೃತ್ತಿ ಮಾಡಿ, ಕಳಿಸಿದ್ದಾರೆ. ಆದರೆ ಮೋದಿ ಯಾಕೆ ನಿವೃತ್ತಿ ತಗೊಂಡಿಲ್ಲ. ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರಿಗೆ ಮೋದಿ ನಿವೃತ್ತಿ ಕೊಟ್ಟಿದ್ದಾರೆ. ಆದ್ರೆ ಇವರು 75 ದಾಟಿ 76 ವರ್ಷಕ್ಕೆ ಬಂದಿದ್ದಾರೆ. ಮೋದಿಯವರ ಕೊಡುಗೆ ಏನಿದೆ? ಅವರು ಮಾಡಿದ ನೀತಿಗಳನ್ನ ಅವರು ಪಾಲನೆ ಮಾಡಿಲ್ಲ. ಇನ್ನೂ ರಾಜ್ಯದಲ್ಲಿ ಬಿಜೆಪಿಯವರ ಹತ್ರ ಏನೂ ದಾಖಲೆಗಳಿಲ್ಲ. ಸುಮ್ನೆ ಎರಡನೇ ವಿಕೆಟ್ ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



