ಅಂಧ, ಸಗಣಿ ಭಕ್ತರ ಕೋಮುದ್ವೇಷ ನಿಲ್ಲಿಸಿದ್ದು ನಮ್ಮ ಸಾಧನೆ; 56 ಇಂಚಿನ ಎದೆಯ ಸುಳ್ಳಿನ ಸರದಾರನಿಗೆ ಜನರನ್ನು ಎದುರಿಸಲಾಗಲಿಲ್ಲ: ಬಿ.ಕೆ ಹರಿಪ್ರಸಾದ್
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈವರೆಗೆ ಒಟ್ಟು 10,000 ಕಿ.ಮೀ ನಡೆಯುವ ಮೂಲಕ ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದರು ಎಂದು ಹರಿಪ್ರಸಾದ್ ಸ್ಮರಿಸಿದರು.

ಬೆಂಗಳೂರು: ದೇಶದಲ್ಲಿ ಬಿಜೆಪಿಯು ಸೃಷ್ಟಿಸಿದ್ದ ಕೋಮು ದ್ವೇಷ, ಹಿಂಸಾಚಾರ ಮತ್ತು ದೌರ್ಜನ್ಯಗಳ ವಿರುದ್ಧ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಸೌಹಾರ್ದತೆ ಮೂಡಿಸಲು ರಾಹುಲ್ ಗಾಂಧಿಯವರು 'ಭಾರತ ಜೋಡೋ ಯಾತ್ರೆ' ನಡೆಸಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾದಾಗ ಯಾರೂ ಧ್ವನಿ ಎತ್ತದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಂತ್ರಸ್ತರ ಪರವಾಗಿ ನಿಂತರು.
ರೋಹಿತ್ ವೇಮುಲ ಕುಟುಂಬಕ್ಕೆ ಧೈರ್ಯ ತುಂಬಿದ್ದರಿಂದ ಹಿಡಿದು ಬಿಲ್ಕಿಸ್ ಬಾನು ಪ್ರಕರಣದವರೆಗೂ ಅವರು ಸದಾ ನ್ಯಾಯದ ಪರ ಹೋರಾಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುವ ಅಗತ್ಯವಿರಲಿಲ್ಲ.
ಆದರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈವರೆಗೆ ಒಟ್ಟು 10,000 ಕಿ.ಮೀ ನಡೆಯುವ ಮೂಲಕ ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದರು ಎಂದು ಹರಿಪ್ರಸಾದ್ ಸ್ಮರಿಸಿದರು.
ರಾಜ್ಯದಲ್ಲಿ ನೆಮ್ಮದಿ ಶಾಂತಿ ನೆಲಸಲು ಕಾಂಗ್ರೆಸ್‍ಗೆ ಅಧಿಕಾರ ನೀಡಲಾಗಿತ್ತು. ಅದರಂತೆ ಸಗಣಿ ಭಕ್ತರು ಕೋಮುದ್ವೇಷ ಹರಡುತ್ತಿರುವುದು ನಿಲ್ಲಿಸಿದ್ದು, ಇದು ನಮ್ಮ ದೊಡ್ಡ ಸಾಧನೆ ಎಂದು ಹೇಳಿದ್ದಾರೆ. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ವಾಗ್ದಾನ ನೀಡಿದೆವು.
ಅಂಧಭಕ್ತರು, ಸೆಗಣಿ ಭಕ್ತರು ಕೋಮುದ್ವೇಷ ಹರಡುತ್ತಿರುವುದು ನಿಲ್ಲಿಸಿದ್ದು, ಇದು ನಮ್ಮ ದೊಡ್ಡ ಸಾಧನೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದಿದ್ದೇವೆ. ಸುಂದರವಾದ, ಸಮೃದ್ಧವಾದ ರಾಜ್ಯ ನಮ್ಮದು. ಇದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈಗಲೂ ದ್ವೇಷ ಹರಡುವುದನ್ನು ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ 1.40 ಕೋಟಿ ಮಕ್ಕಳ ಭವಿಷ್ಯ ಹಾಳು ಮಾಡಲು ಮುಂದಾಗಿದ್ದರು. ಈ ವಿಚಾರವಾಗಿ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಗಟ್ಟಿಯಾದ ಹೋರಾಟ ಮಾಡಬೇಕು.
ಜೆನ್ ಝಿ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಮಂಡಿಯೂರುವಂತೆ ಮಾಡಿದರು. 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ಸುಳ್ಳಿನ ಸರದಾರ ಜನರನ್ನು ಎದುರಿಸಲಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



