ರಾಜಕೀಯ

'ಅಲ್ಪರಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದರಂತೆ...': ಪ್ರಿಯಾಂಕ್ ಖರ್ಗೆ ಝೀರೋ ಟ್ರಾಫಿಕ್‌ ಕುರಿತು ಬಿಸಿ ಪಾಟೀಲ್ ವ್ಯಂಗ್ಯ

ಹೋಂ ಮಿನಿಸ್ಟ್ರಿಗೆ ಜೀರೋ ಟ್ರಾಫಿಕ್ ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಮತ್ತು ನನಗೆ ಗೊತ್ತಿರುವ ವಿಷಯ ಇದು ಯಾವಾಗಿನಿಂದ ಬಂತು. ಇದರಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ಏರ್ಪೋರ್ಟ್ ಹೋಗುವಂತ ಪ್ರಯಾಣಿಕರು ಪರದಾಡುವಂತಾಯಿತು.

'ಅಲ್ಪರಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದರಂತೆ...': ಪ್ರಿಯಾಂಕ್ ಖರ್ಗೆ ಝೀರೋ ಟ್ರಾಫಿಕ್‌ ಕುರಿತು ಬಿಸಿ ಪಾಟೀಲ್ ವ್ಯಂಗ್ಯ
ಪ್ರಿಯಾಂಕ್ ಖರ್ಗೆ
Published On :

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎಂದು ಆರೋಪಿಸಿರುವ ಮಾಜಿ ಸಚಿವ ಬಿ.ಸಿ. ಪಾಟೀಲ್, ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿ.ಸಿ. ಪಾಟೀಲ್, ಮಂಗಳವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಬೆಂಗಳೂರಿನಿಂದ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದಾಗ ಸಂಚಾರ ಪೊಲೀಸರು ರಸ್ತೆಯನ್ನು ತಡೆದು ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು ಎಂದು ಹೇಳಿದ್ದಾರೆ.

ಯಾರು ತೆರಳುತ್ತಿದ್ದಾರೆ ಎಂದು ಪೊಲೀಸರನ್ನು ಪ್ರಶ್ನಿಸಿದಾಗ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾರೆ ಎಂದು ತಿಳಿಸಿದ್ದರು.

ಹೋಂ ಮಿನಿಸ್ಟ್ರಿಗೆ ಜೀರೋ ಟ್ರಾಫಿಕ್ ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಮತ್ತು ನನಗೆ ಗೊತ್ತಿರುವ ವಿಷಯ ಇದು ಯಾವಾಗಿನಿಂದ ಬಂತು. ಇದರಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ಏರ್ಪೋರ್ಟ್ ಹೋಗುವಂತ ಪ್ರಯಾಣಿಕರು ಪರದಾಡುವಂತಾಯಿತು. ಅಲ್ಪರಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಲಿ ಕೊಡೆ ಹಿಡಿದಿದ್ದರು ಅಂತ ಹೇಳ್ತಾರೆ ಹಾಗಾಯ್ತು ಈ ರಾಜ್ಯದ ಗೃಹಮಂತ್ರಿ ಕತೆ ಎಂದು ವ್ಯಂಗ್ಯವಾಡಿದ್ದಾರೆ.

ಸಾಕಷ್ಟು ಪ್ರಯಾಣಿಕರು ಫ್ಲೈಟ್ ತಪ್ಪಿ ಹೋಗುತ್ತೆ ಅಂತ ಪರದಾಡ್ತಾ ಇದ್ರು ಇದು ಎಐಸಿಸಿ ಅಧ್ಯಕ್ಷ ರ ಮಗ ಎನ್ನುವುದಕ್ಕೆ ವಿಶೇಷ ಸೌಲಭ್ಯವೇ ಇನ್ನು ಮುಂದಾದರೂ ಮುಖ್ಯಮಂತ್ರಿಗಳು ಇಂತಹ ಗೃಹ ಮಂತ್ರಿ ಗೆ ಸೂಕ್ತ ತಿಳುವಳಿಕೆಯನ್ನು ನೀಡಿ ಕಾನೂನು ಬದ್ಧವಾಗಿ ನಡೆದುಕೊಳ್ಳಲು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.