ಚುನಾವಣಾ ಆಯೋಗ BJPಯ 'ಎಲೆಕ್ಷನ್ ಮೋರ್ಚಾ' ಆಗಿದೆಯೇ? ಜ್ಞಾನೇಶ್ ಕುಮಾರ್‌ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
"ಆಯೋಗ" ಎಂದರೆ ಒಬ್ಬ ವ್ಯಕ್ತಿಯಲ್ಲ, ಆ ಸಂಸ್ಥೆಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಯೋಗ ಎನಿಸಿಕೊಳ್ಳುತ್ತದೆ, ಸರ್ವಾನುಮತದ ನಿರ್ಧಾರಗಳು ಮಾತ್ರ ಆಯೋಗದ ನಿರ್ಧಾರ ಎನಿಸಿಕೊಳ್ಳುತ್ತದೆ.

ಬೆಂಗಳೂರು: ಸ್ವಾಯುತ್ತ ಸಂಸ್ಥೆ ಎನಿಸಿಕೊಳ್ಳುವ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಅದರ ಪರವಾಗಿ ಸಮರ್ಥನೆಗೆ ಬಿಜೆಪಿ ಮುನ್ನುಗ್ಗಿ ಬರುವುದೇಕೆ? ಚುನಾವಣಾ ಆಯೋಗ ಬಿಜೆಪಿಯ "ಎಲೆಕ್ಷನ್ ಮೋರ್ಚಾ"ವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾಯುತ್ತ ಸಂಸ್ಥೆ ಎನಿಸಿಕೊಳ್ಳುವ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗಲೆಲ್ಲಾ ಅದರ ಪರವಾಗಿ ಸಮರ್ಥನೆಗೆ ಬಿಜೆಪಿ ಮುನ್ನುಗ್ಗಿ ಬರುವುದೇಕೆ? ಚುನಾವಣಾ ಆಯೋಗ ಬಿಜೆಪಿಯ "ಎಲೆಕ್ಷನ್ ಮೋರ್ಚಾ"ವೇ? ಬಿಜೆಪಿಗೂ ಸ್ವಾಯುತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೂ ಏನು ಅವಿನಾಭಾವ ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
"ಆಯೋಗ" ಎಂದರೆ ಒಬ್ಬ ವ್ಯಕ್ತಿಯಲ್ಲ, ಆ ಸಂಸ್ಥೆಯಲ್ಲಿರುವ ಸದಸ್ಯರೆಲ್ಲರೂ ಸೇರಿ ಆಯೋಗ ಎನಿಸಿಕೊಳ್ಳುತ್ತದೆ, ಸರ್ವಾನುಮತದ ನಿರ್ಧಾರಗಳು ಮಾತ್ರ ಆಯೋಗದ ನಿರ್ಧಾರ ಎನಿಸಿಕೊಳ್ಳುತ್ತದೆ. ಆದರೆ, ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ನಿರ್ಧಾರಗಳು ಕೇವಲ ಒಬ್ಬ ವ್ಯಕ್ತಿಯ ನಿರ್ಧಾರವಾಗಿರುವುದು ಬಯಲಾಗಿದೆ. ಹೀಗಾಗಿ ಆ ಎಲ್ಲಾ ನಿರ್ಧಾರಗಳ ಆಧಾರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾನೂನು ಬಾಹಿರ ಮತ್ತು ಅನರ್ಹ ಪ್ರಕ್ರಿಯೆಗಳಾಗಿವೆ ಎಂದು ಹೇಳಿದ್ದಾರೆ.
ಈ ಹಿಂದೆ ಶ್ರೀ ರಾಹುಲ್ ಗಾಂಧಿಯವರು ಓಟ್ ಚೋರಿಯನ್ನು ಸಾಕ್ಷಿ ಸಮೇತ ದೇಶದ ಮುಂದಿಟ್ಟಾಗ ತಕ್ಷಣವೇ ರಾಜಕೀಯ ಪಕ್ಷದಂತೆ ಪತ್ರಿಕಾಗೋಷ್ಠಿ ನಡೆಸಿದ CEC ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ ಎದ್ದಿರುವಾಗ ನಾಪತ್ತೆಯಾಗಿದ್ದಾರೆ. ಅವರು ಪತ್ರಿಕಾಗೋಷ್ಠಿ ಮಾಡುವ ಬದಲು ಬಿಜೆಪಿ ವಕ್ತಾರಿಕೆ ನಡೆಸುತ್ತಿದೆ. ಬಿಜೆಪಿಗೆ ನಾನು ಕೇಳುವ ಮತ್ತೊಂದು ಬಹುಮುಖ್ಯ ಪ್ರಶ್ನೆ, ಜ್ಞಾನೇಶ್ ಕುಮಾರ್ ರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ? ಎಂದು ಅವರು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



