ರಾಜ್ಯ

ಬಿಜೆಪಿ ನಾಯಕರಿಗೆ 'ವಂದೇ ಮಾತರಂ'ನ ಕೊನೆಯ ಎರಡು ಚರಣ ಉಚ್ಚರಿಸಲು ಬರುವುದಿಲ್ಲ: ಪ್ರಿಯಾಂಕ್ ಖರ್ಗೆ; Video

ಬಿಜೆಪಿ ನಾಯಕರಿಗೆ ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿ ತಿಳಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಟೀಕಿಸಿದ್ದಾರೆ. ಗೀತೆ ಹಾಡುವ ಸಂದರ್ಭದಲ್ಲಿ ಅವರು ಸಾಹಿತ್ಯವನ್ನು ನೋಡಿ ಹಾಡಲು ಪ್ರಯತ್ನಿಸುತ್ತಿದ್ದುದಾಗಿ ಉಲ್ಲೇಖಿಸಿದ್ದಾರೆ.

ಬಿಜೆಪಿ ನಾಯಕರಿಗೆ 'ವಂದೇ ಮಾತರಂ'ನ ಕೊನೆಯ ಎರಡು ಚರಣ ಉಚ್ಚರಿಸಲು ಬರುವುದಿಲ್ಲ: ಪ್ರಿಯಾಂಕ್ ಖರ್ಗೆ; Video
ಬಿಜೆಪಿ ನಾಯಕರನ್ನು ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್ ಖರ್ಗೆ
Published On :

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿನ್ನೆ ಸೋಮವಾರ ಬಿಜೆಪಿ ಶಾಸಕರ ವಿರುದ್ಧ ವ್ಯಂಗ್ಯವಾಡಿದ್ದು, ರಾಷ್ಟ್ರಗೀತೆ ‘ವಂದೇ ಮಾತರಂ’ನ ಕೊನೆಯ ಎರಡು ಚರಣಗಳನ್ನು ಸರಿಯಾಗಿ ಉಚ್ಚರಿಸಲು ಪ್ರತಿಪಕ್ಷದ ನಾಯಕರು ಮತ್ತು ಸದಸ್ಯರು ಪರದಾಡಿದರು ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿ ತಿಳಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಟೀಕಿಸಿದ್ದಾರೆ. ಗೀತೆ ಹಾಡುವ ಸಂದರ್ಭದಲ್ಲಿ ಅವರು ಸಾಹಿತ್ಯವನ್ನು ನೋಡಿ ಹಾಡಲು ಪ್ರಯತ್ನಿಸುತ್ತಿದ್ದುದಾಗಿ ಉಲ್ಲೇಖಿಸಿದ್ದಾರೆ.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಸೋಮವಾರದ ಕಲಾಪ ಆರಂಭದಲ್ಲಿ ಬಿಜೆಪಿ ಶಾಸಕರು ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿಯನ್ನು ಹಾಡಿದರು. ಆದರೆ, ಎರಡೂ ಸದನಗಳಲ್ಲಿ ಅಧಿಕೃತವಾಗಿ ಪ್ರಸಾರ ಮಾಡಲಾದ ಧ್ವನಿಮುದ್ರಣವು ಎರಡು ಚರಣಗಳಲ್ಲಿ ಕೊನೆಗೊಂಡಿತು. ಇದಾದ ಬಳಿಕ ಬಿಜೆಪಿ ಸದಸ್ಯರು, ‘ವಂದೇ ಮಾತರಂ’ ನ್ನು ಪೂರ್ಣವಾಗಿ ಪ್ರಸಾರ ಮಾಡದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಷ್ಟ್ರಗೀತೆಯ ಉಳಿದ ಚರಣಗಳನ್ನು ಉಚ್ಚರಿಸುವುದು ಕಷ್ಟಕರವಾಗಿದ್ದು, ಅವುಗಳಲ್ಲಿ ಬಂಗಾಳಿ ಪದಗಳಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಪ್ರದೇಶದ ನಮ್ಮೆಲ್ಲರಿಗೂ, ನಿಮಗೂ ಮಾಧ್ಯಮದವರಿಗೂ ಇದನ್ನು ಉಚ್ಚರಿಸುವುದು ಕಷ್ಟವಾಗಬಹುದು. ಬಾಲ್ಯದಿಂದಲೂ ನಾವು ಕಲಿತಿರುವ ಎರಡು ಚರಣಗಳು ನಮಗೆ ಸರಿಯಾಗಿ ಗೊತ್ತಿವೆ. ಉಳಿದ ಬಹುತೇಕ ಭಾಗ ಬಂಗಾಳಿ ಭಾಷೆಯಲ್ಲಿದೆ ಎಂದುನಹೇಳಿದರು.

ರಾಜ್ಯದಲ್ಲಿ ತೀವ್ರವಾಗಿ ತಲೆದೋರಿರುವ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಡಾ. ಕಸ್ತೂರಿರಂಗನ್ ವರದಿಯ ಪರಿಣಾಮಗಳ ಕುರಿತು ಚರ್ಚಿಸಲು ಸರ್ಕಾರ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನ ಕರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.