ನಿಮ್ಮ ಮುಖ ಮುಚ್ಕೊಳ್ಳೇಕೆ ಬುರ್ಖಾ ಬೇಕು..; ಜನಿವಾರ, ಶಿವದಾರ ಧರಿಸಲು ಅವಕಾಶ ಕೊಡೋಕೆ ನೀವ್ಯಾವ ದೊಣ್ಣೆನಾಯಕ?: Pratap Simha; Video
ಮೂರು ವರ್ಷದಲ್ಲಿ ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಮುಖ ಮುಚ್ಚಲು ಬುರ್ಖಾ ಬೇಕು..
ಮೈಸೂರು: ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶ ರದ್ದು ಮಾಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶ ರದ್ದು ಆದೇಶ ಹೊಸ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ನಡೆ ವಿರುದ್ಧ ಬಿಜೆಪಿ ನಾಯಕರು ತೀವ್ರ ಕಿಡಿಕಾರುತ್ತಿದ್ದಾರೆ.
ಈ ಪಟ್ಟಿಗೆ ಇದೀಗ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸೇರ್ಪಡೆಯಾಗಿದ್ದು, 'ಮುಸಲ್ಮಾನ ಹೆಣ್ಣುಮಕ್ಕಳಿಗೆ ಬುರ್ಖಾ ಬೇಕೋ, ಬೇಡವೋ ಗೊತ್ತಿಲ್ಲ. ಆದರೆ ಮೂರು ವರ್ಷದಲ್ಲಿ ಮೂರುಕಾಸಿನ ಕೆಲಸ ಮಾಡದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ಮುಖ ಮುಚ್ಚಲು ಬುರ್ಖಾ ಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಳದೇ ಇದ್ದರೂ ಕೊಟ್ಟಿದ್ದೇಕೆ?
ಮುಸ್ಲಿಮರು ಯಾರು ಹಿಜಾಬ್ ಗೆ ಅವಕಾಶ ಕೇಳಿಲ್ಲ. ಆದರೆ ಹಿಂದೂಗಳ ಉರಿಸಲು ಕಾಂಗ್ರೆಸ್ ಈ ರೀತಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಸಮವಸ್ತ್ರ ಸಂಹಿತೆ ಬದಿಗಿಟ್ಟು ಹಿಜಾಬ್ ಗೆ ಅವಕಾಶ ಕೊಟ್ಟಿದೆ. ಮುಸ್ಲಿಮರ ಪ್ರೀತಿ ಗಳಿಸುವುದಕ್ಕಿಂತ ಹಿಂದೂಗಳ ಉರಿಸುವುದೆ ಕಾಂಗ್ರೆಸ್ ನ ಅಜೆಂಡಾ ಆಗಿದೆ. ಮೂರು ಕಾಸಿನ ಕೆಲಸ ಮಾಡದ ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಹೀಗಾಗಿ ಇವರಿಗೆಲ್ಲ ಬುರ್ಕಾ ಬೇಕೆ ಬೇಕಿದೆ ಎಂದು ಪ್ರತಾಪ್ ಸಿಂಹ್ ಹೇಳಿದ್ದಾರೆ.
ಇವರು ಯಾವ ದೊಣ್ಣೆ ನಾಯಕ?
ಜನಿವಾರ, ಶಿವಧಾರ ಒಟ್ಟೆ ಒಳಗೆ ಹಾಕುತ್ತೇವೆ. ಅದನ್ನು ಪ್ರದರ್ಶನ ಮಾಡಲ್ಲ. ಜನಿವಾರ, ಶಿವಧಾರಕ್ಕೆ ಅನುಮತಿ ಕೊಡುವುದಕ್ಕೆ ನೀವು ಯಾವ ದೊಣ್ಣೆ ನಾಯಕ. ಎರಡು ವರ್ಷ ಕಳೆಯಲಿ ಪೀಡೆ ತೊಲಗಿತು ಎಂದು ಕಾಂಗ್ರೆಸ್ ಗೆ ಜನರು ತರ್ಪಣ ಬಿಡುತ್ತಾರೆ. ಶಾಲೆಗಳಿಗೆ ಬುರ್ಕಾವೂ ಬೇಡ ಕೇಸರಿ ಶಾಲು ಬೇಡ ಎಂದರು.
ಅಲ್ಲದೆ ಸಿದ್ದರಾಮಯ್ಯ ಮಾಡುತ್ತಿರುವುದು ತಾಲಿಬಾನ್ ಸರಕಾರ. ಸಿದ್ದರಾಮಯ್ಯ ಕರ್ನಾಟಕದ ಖಮೇನಿ ಆಗೋಕೆ ಪ್ರಯತ್ನ ಪಡುತ್ತಿದ್ದಾರೆ. ಹಿಂದೂಗಳು ಜಾತಿ ಜಾತಿ ಅಂತಾ ಹೊಡೆದಾಡುವುದು ಬಿಡಿ. ಜಾತಿ ಜಾತಿ ಅಂತಾ ಸಾಯುವುದು ಬಿಡಿ. ಹಿಂದೂಗಳಾಗಿ ಒಗ್ಗೂಡುವ ಕಾಲ ಬಂದಿದೆ. ಸನಾತನ ಧರ್ಮ ನಾಶವನ್ನು ಮಾಡಲು ಸಿದ್ದರಾಮಯ್ಯ ರಂಥವರು ಯತ್ನಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


