2028ಕ್ಕೆ ರಾಜ್ಯದಲ್ಲಿ ಹಿಂದೂ ಸರ್ಕಾರ; ಪೊಲೀಸರ ಕೈಗೆ AK-47 ಕೊಟ್ಟು, ಪಾಕಿಸ್ತಾನ್ ಜಿಂದಾಬಾದ್ ಅಂದವರ ಬಾಯಿಗೆ ಗುಂಡು ಹೊಡೆಸ್ತೀವಿ: ಯತ್ನಾಳ್
ನಮ್ಮ ಪಕ್ಷ ಸರ್ಕಾರ ರಚಿಸಿದ್ದೇ ಆದರೆ, ಗಣಪತಿ ಉತ್ಸವಾ ಅಥವಾ ಹಿಂದೂ ಆಚರಣೆಗಳ ಮೇಲೆ ಹಲ್ಲೆ ನಡೆದರೆ ಬುಲ್ಡೋಜರ್ ಬಳಸಲಾಗುವುದು, ಪೊಲೀಸ್ ಅಧಿಕಾರಿಗಳನ್ನು AK-47 ರೈಫಲ್‌ಗಳಿಂದ ಸಜ್ಜುಗೊಳ್ಳಲಾಗುವುದು. ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗುವವರಿಗೆ ಬಾಯಿಗೆ ಗುಂಡು ಹೊಡೆಸಲಾಗುವುದು.

ಮದ್ದೂರು: 2028ಕ್ಕೆ ರಾಜ್ಯದಲ್ಲಿ ಹಿಂದೂಗಳ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂದರೆ, ಪೊಲೀಸರ ಕೈಗೆ ಎಕೆ.47 ಕೊಟ್ಟು ಪಾಕಿಸ್ತಾನ್ ಜಿಂದಾಬಾದ್ ಅಂದವರ ಬಾಯಿಗೆ ಗುಂಡು ಹೊಡೆಸ್ತೀವಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೋಮವಾರ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸೋಮವಾರ ವಿವಿಧ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ಯಾಳ್ ಅವರು ಮಾತನಾಡಿದ್ದರು.
ಈ ಸಂದರ್ಭದಲ್ಲಿ ಯತ್ನಾಳ್ ಅವರು, 2028 ರ ಕರ್ನಾಟಕ ಚುನಾವಣೆಗಳಲ್ಲಿ ‘ಹಿಂದೂ ಸರ್ಕಾರ’ ಅಧಿಕಾರಕ್ಕೆ ಬರುವುದಾಗಿ ಭವಿಷ್ಯವಾಣಿ ನುಡಿದರು.
ನಮ್ಮ ಪಕ್ಷ ಸರ್ಕಾರ ರಚಿಸಿದ್ದೇ ಆದರೆ, ಗಣಪತಿ ಉತ್ಸವಾ ಅಥವಾ ಹಿಂದೂ ಆಚರಣೆಗಳ ಮೇಲೆ ಹಲ್ಲೆ ನಡೆದರೆ ಬುಲ್ಡೋಜರ್ ಬಳಸಲಾಗುವುದು, ಪೊಲೀಸ್ ಅಧಿಕಾರಿಗಳನ್ನು AK-47 ರೈಫಲ್‌ಗಳಿಂದ ಸಜ್ಜುಗೊಳ್ಳಲಾಗುವುದು. ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಕೂಗುವವರಿಗೆ ಬಾಯಿಗೆ ಗುಂಡು ಹೊಡೆಸಲಾಗುವುದು. ನಮ್ಮ ಸರ್ಕಾರ ಬಂದರೆ ಹಿಂದೂ ಸಂಘಟನೆಗಳ ಸದಸ್ಯರ ಮೇಲಿನ ಕೇಸುಗಳನ್ನು ರದ್ದು ಮಾಡಲಾಗುವುದು ಎಂದು ಹೇಳಿದರು.
ಮದ್ದೂರಿನಿಂದ ಕರ್ನಾಟಕದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ನಾನು ಚಾಮರಾಜನಗರದಿಂದ ಬಸವ ಕಲ್ಯಾಣವರೆಗೆ ಪ್ರವಾಸ ಮಾಡುತ್ತೇನೆ. 2028 ರಲ್ಲಿ ರಾಜ್ಯದಲ್ಲಿ ಭಾರಿ ಬದಲಾವಣೆ ಬರಲಿದೆ ಎಂದು ತಿಳಿಸಿದರು.
ಅನಂತಕುಮಾರ್ ಹೆಗಡೆ ಮಾತನಾಡಿ, ನಮ್ಮಲ್ಲಿ ಹರಿಯುತ್ತಿರುವುದು ಗುಲಾಮಿ ರಕ್ತವಲ್ಲ, ವೀರ ರಕ್ತ. ಅಪ್ಪನ ಪರಿಚಯ ಇಲ್ಲದವರು ಜಾತ್ಯತೀತ ಅಂತ ಹೇಳಿಕೊಳ್ಳುತ್ತಾರೆ, ನಾವ್ಯಾರು ಜಾತ್ಯತೀತರು ಅಲ್ಲ, ಏಕೆಂದರೆ ನಮಗೆ ಅಪ್ಪ–ಅಮ್ಮನ ಪರಿಚಯವಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲಗೊಳಿಸಿ, ಧರ್ಮದ ಏಕತೆಯನ್ನು ಸಾಧಿಸಬೇಕು. ಇದರಿಂದ ನಮ್ಮ ಪೂರ್ವಜರ ಬಲಿದಾನ ದಿವಸಕ್ಕೆ ಅರ್ಥ ಸಿಗುತ್ತದೆ ಎಂದರು.
ಕಾರ್ಯಕ್ರಮದ ವೇಳೆ ಯತ್ನಾಲ್ ಮತ್ತು ಹೆಗಡೆ ಐಬಿ ಸರ್ಕಲ್‌ನಿಂದ ಹಳೆಯ ಬಸ್ ಸ್ಟ್ಯಾಂಡ್‌ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಮತ್ತು ಯುವಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ತೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



