ಪಿಚ್ಚರ್ ಅಭಿ ಬಾಕಿ ಹೈ, ಇದು ಟ್ರೈಲರ್ ಅಷ್ಟೇ: KPCC ಅಧ್ಯಕ್ಷ ಹರಿಪ್ರಸಾದ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?
ಇದರ ಬೆನ್ನಲ್ಲೇ ಬಿಕೆ ಹರಿಪ್ರಸಾದ್ ಅವರು ಕುಮಾರಕೃಪ ರಸ್ತೆಯಲ್ಲಿನ ಸಿಎಂ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ ಹರಿಪ್ರಸಾದ್ ಅವರು ಗುರುವಾರ ಬೆಳಗ್ಗೆ ʻಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿʼ ಎಂದು ಹೇಳಿದ್ದರು.
ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಕೆ.ಹರಿಪ್ರಸಾದ್, ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿಕಾರ ಬೇಕಾದವರು ಡಿ.ಕೆ.ಶಿವಕುಮಾರ್ ಬಳಿ ಹೋಗಲಿ, ಪಕ್ಷದ ಸಂಘಟನೆಯನ್ನು ಸದೃಢಗೊಳಿಸಬೇಕು ಎಂಬ ಆಸಕ್ತಿ ಹೊಂದಿರುವವರು ತಮೊಂದಿಗೆ ಬರಲಿ. ಸ್ಥಾನಮಾನಗಳಿಗಿಂತ ಪಕ್ಷ ದೊಡ್ಡದು ಎಂದು ನೇರವಾಗಿ ಹೇಳಿದ್ದಾರೆ.
ಇದರ ಬೆನ್ನಲ್ಲೇ ಬಿಕೆ ಹರಿಪ್ರಸಾದ್ ಅವರು ಕುಮಾರಕೃಪ ರಸ್ತೆಯಲ್ಲಿನ ಸಿಎಂ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಹರಿಪ್ರಸಾದ್, “ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ” ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು “ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ” ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಅವರಿಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ. ಇದು ಕೇವಲ ಟ್ರೇಲರ್ ಮಾತ್ರ” ಎಂದು ಗುಡುಗಿದರು.
ಡಿಕೆ ಶಿವಕುಮಾರ್ ಸರ್ಕಾರದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹೊಸ ಸಚಿವ ಸಂಪುಟದಲ್ಲಿ ಹಳೆಯ ಮುಖಗಳೇ ಇವೆ. ಜನರು ಹೊಸ ಶಕ್ತಿ ಮತ್ತು ಹೊಸ ದಿಕ್ಕನ್ನು ನಿರೀಕ್ಷಿಸಿದ್ದರು. ಆದರೆ ಇದು ಒಂದೇ ರೀತಿಯ ನಾಯಕರ ಗುಂಪಾಗಿದೆ. ಹೊಸ ಮುಖಗಳಿಲ್ಲ. ಇದು ಹೊಸ ವೇಷದಲ್ಲಿರುವ ಹಳೆಯ ಸರ್ಕಾರ ವ್ಯಂಗ್ಯವಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



