ರಾಜಕೀಯ

ಮಿಸ್ಟರ್‌ 'ಕೆರೆ ಕಳ್ಳ' ಚಲುವರಾಯಸ್ವಾಮಿ, ನಿನ್ನ ಹಣದಾಹಕ್ಕೆ ಕಾಂಟ್ರ್ಯಾಕ್ಟರ್‌ನನ್ನು ಬೀದಿಗೆ ತಂದಿದ್ದೀಯಾ: ಜೆಡಿಎಸ್

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕಾಂಟ್ರ್ಯಾ ಕ್ಟರ್‌ ಒಬ್ಬರಿಗೆ ಟಿಕೆಟ್‌ ಕೊಡಿಸಿ, ಎಷ್ಟು ಹಣ ಸಂಪಾದಿಸಿದ್ದೀಯಾ ಎಲ್ಲಿರಿಗೂ ಗೊತ್ತು, ನಿನ್ನ ಹಣದಾಹಕ್ಕೆ ಆ ವ್ಯಕ್ತಿಯನ್ನು ಬೀದಿಗೆ ತಂದಿದ್ದೀಯ ಎಂದು ವಾಗ್ದಾಳಿ ನಡೆಸಿದೆ.

ಮಿಸ್ಟರ್‌ 'ಕೆರೆ ಕಳ್ಳ' ಚಲುವರಾಯಸ್ವಾಮಿ, ನಿನ್ನ ಹಣದಾಹಕ್ಕೆ ಕಾಂಟ್ರ್ಯಾಕ್ಟರ್‌ನನ್ನು ಬೀದಿಗೆ ತಂದಿದ್ದೀಯಾ: ಜೆಡಿಎಸ್
ಚಲುವರಾಯಸ್ವಾಮಿ
Published On :

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಸಮೀಪಿಸಿದ್ದುಮೂರು ಪಕ್ಷಗಳು ಭರ್ಜರಿ ಪ್ರಚಾರ, ಪರಸ್ಪರ ವಾಗ್ದಾಳಿ ತೀವ್ರವಾಗಿ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಎಕ್ಸ್ ಮೂಲಕ ತಿರುಗೇಟು ನೀಡಿದೆ.

ಮಿಸ್ಟರ್‌ "ಕೆರೆ ಕಳ್ಳ ಚಲುವರಾಯಸ್ವಾಮಿ, ಎಚ್ .ಡಿ ಕುಮಾರಸ್ವಾಮಿ ಅವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುವುದು ನಿಮಗೂ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಪಕ್ಷಕ್ಕೆ ಅಂಟಿರುವ ಬಾಯಿರೋಗ. ಮಾಕಳಿಯಲ್ಲಿ ₹70 ಕೋಟಿ ಮೌಲ್ಯದ ಕೆರೆ ನುಂಗಿದ ನೀನೊಬ್ಬ ಖತರ್ನಾಕ್ ಕಳ್ಳ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕಾಂಟ್ರ್ಯಾ ಕ್ಟರ್‌ ಒಬ್ಬರಿಗೆ ಟಿಕೆಟ್‌ ಕೊಡಿಸಿ, ಎಷ್ಟು ಹಣ ಸಂಪಾದಿಸಿದ್ದೀಯಾ ಎಲ್ಲಿರಿಗೂ ಗೊತ್ತು, ನಿನ್ನ ಹಣದಾಹಕ್ಕೆ ಆ ವ್ಯಕ್ತಿಯನ್ನು ಬೀದಿಗೆ ತಂದಿದ್ದೀಯ ಎಂದು ವಾಗ್ದಾಳಿ ನಡೆಸಿದೆ.

ಕೃಷಿ ಸಚಿವನಾಗಿ ಇಲಾಖೆಯಲ್ಲಿ ಅಕ್ರಮ ವರ್ಗಾವಣೆ ದಂಧೆ, ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಅಕ್ರಮ, ರೈತರಿಗೆ ಪರಿಹಾರ ಹಣ ಕೊಡದೆ ವಂಚಿಸುತ್ತಿರುವ ವಂಚಕ ಮಂತ್ರಿ ನೀನು. ಮಂಡ್ಯ ಜಿಲ್ಲೆಯಲ್ಲಿ ನಾಲೆಗಳ ಅಭಿವೃದ್ಧಿ ಹೆಸರಲ್ಲಿ ಗುತ್ತಿಗೆದಾರರಿಂದ ಕಮಿಷನ್‌ ಪಡೆಯುತ್ತಿರುವ ಲೂಟಿಕೋರ ನೀನು. ಇನ್ನು, ವಾಲ್ಮೀಕಿ ನಿಗಮದ ಪರಿಶಿಷ್ಟ ಸಮುದಾಯ ₹187 ಕೋಟಿ ಹಣವನ್ನು ಲೂಟಿಹೊಡೆದು, ನಿಮ್ಮ ಸಂಪುಟದ ಮಾಜಿಮಂತ್ರಿ ನಾಗೇಂದ್ರ ಜೈಲುಹಕ್ಕಿಯಾಗಿ ಹೊರ ಬಂದಿದ್ದಾನೆ. ಮುಡಾ ಹಗರಣದ 420, A1 ಆರೋಪಿ ಸಿದ್ದರಾಮಯ್ಯ ಸದ್ಯದಲ್ಲೇ ಜೈಲು ಸೇರುವುದು ಗ್ಯಾರಂಟಿಯಾಗಿದೆ. ನಿಮ್ಮಂತ ಕಡು ಭ್ರಷ್ಟರಿಂದ ನೀತಿ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ. ಜೆಡಿಎಸ್‌ ಪಕ್ಷಕ್ಕೆ ಹಣ ಹಂಚಿ ಚುನಾವಣೆ ನಡೆಸುವ ಅವಶ್ಯಕತೆಯೂ ಇಲ್ಲ. ನಿಮ್ಮ ಕಳ್ಳರ ಗುಂಪಿನ ಮತ್ತೊಬ್ಬ ಸಚಿವ ಜಮೀರ್ ಅಹ್ಮದ್ ಖಾನ್ ಸಾರ್ವಜನಿಕವಾಗಿ ಭ್ರಷ್ಟಾಚಾರದ ಹೆಬ್ಬಂಡೆ ಡಿ.ಕೆ ಶಿವಕುಮಾರ್ ನ ಹಣ ಹಂಚುತ್ತಿರುವ ವಿಡಿಯೋ ಈಗಾಗಲೇ ಎಲ್ಲೆಡೆ ಸುದ್ದಿಯಾಗಿದೆ. ನಿಮ್ಮ ಮಾತುಗಳು "ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಲೇವಡಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.