ರಾಜಕೀಯ

ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಎನ್ ಡಿಎಗೆ ಮುನ್ನಡೆ ಸಿಕ್ಕಿಲ್ಲ: CT Ravi

ಮತ್ತೊಮ್ಮೆ ಮೋದಿ ಎಂದುಕೊಂಡಿದ್ದ ಜನರ ಬಯಕೆ ನಿಜವಾಗುತ್ತಿದೆ, ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಇನ್ನೂ ಲಭ್ಯವಾಗಿಲ್ಲ. 300 ರಿಂದ 350 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು.

ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಎನ್ ಡಿಎಗೆ ಮುನ್ನಡೆ ಸಿಕ್ಕಿಲ್ಲ: CT Ravi
ಸಿ ಟಿ ರವಿ
Published On :

ಬೆಂಗಳೂರು: 2014 ಮತ್ತು 2019 ರ ಚುನಾವಣೆ ಸಂದರ್ಭದಲ್ಲೂ ಬೆಳಗಿನ 11 ಗಂಟೆ ಹೊತ್ತಿಗೆ ಇದೇ ರೀತಿಯ ವಾತಾವರಣವಿತ್ತು, ಆದರೆ ಮಧ್ಯಾಹ್ನವಾಗುತ್ತಿದಂತೆಯೇ ಎನ್ ಡಿ ಎ ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ಹಿರಿಯ ಬಿಜಿಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೊಮ್ಮೆ ಮೋದಿ ಎಂದುಕೊಂಡಿದ್ದ ಜನರ ಬಯಕೆ ನಿಜವಾಗುತ್ತಿದೆ, ಆದರೆ ನಿರೀಕ್ಷಿಸಿದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಇನ್ನೂ ಲಭ್ಯವಾಗಿಲ್ಲ. 300 ರಿಂದ 350 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಸಂಖ್ಯೆಯಲ್ಲಿ ಕೊಂಚ ಹಿನ್ನಡೆಯಾಗಬಹುದು ಆದರೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವ ಮಾತಿಗೆ ಜನ ಮನ್ನಣೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿದರು.

ಅದಾಗ್ಯೂ, ಈಗಲೇ ಯಾವುದನ್ನೂ ನಿರ್ಧಾರಿತವಾಗಿ ಹೇಳಲಾಗಲ್ಲ, ಒಂದು ಗಂಟೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ ಅವರು, 2014 ಮತ್ತು 2019 ರ ಚುನಾವಣೆ ಸಂದರ್ಭದಲ್ಲೂ ಬೆಳಗಿನ 11 ಗಂಟೆ ಹೊತ್ತಿಗೆ ಇದೇ ರೀತಿಯ ವಾತಾವರಣವಿತ್ತು, ಆದರೆ ಮಧ್ಯಾಹ್ನವಾಗುತ್ತಿದಂತೆಯೇ ಎನ್ ಡಿ ಎ ಭಾರೀ ಸಂಖ್ಯೆಯಲ್ಲಿ ಸೀಟುಗಳನ್ನು ಗೆದ್ದು ಬೀಗಿತ್ತು. ಈ ಬಾರಿಯೂ ಹಾಗೆಯೇ ಆಗಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ಹಿರಿಯ ಬಿಜಿಪಿ ನಾಯಕ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.