ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿದ್ದುಗೆ ಹಣಕಾಸು, ಡಿಕೆಶಿಗೆ ಜಲಸಂಪನ್ಮೂಲ, ಪರಂಗೆ ಗೃಹ ಇಲಾಖೆ ಸಾಧ್ಯತೆ
ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಣಕಾಸು, ವಾರ್ತೆ ಮತ್ತು ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿಯೇ ಇಟ್ಟುಕೊಳ್ಳಲಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ದೊರೆಯುವ ಸಾಧ್ಯತೆಯಿದೆ.

ಬೆಂಗಳೂರು: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಣಕಾಸು, ವಾರ್ತೆ ಮತ್ತು ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿಯೇ ಇಟ್ಟುಕೊಳ್ಳಲಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ದೊರೆಯುವ ಸಾಧ್ಯತೆಯಿದೆ.
ಉಳಿದಂತೆ ಇತರ ಸಚಿವರ ಸಂಭಾವ್ಯ ಖಾತೆಗಳ ವಿವರ ಇಂತಿದೆ:
ಡಾ. ಜಿ. ಪರಮೇಶ್ವರ್- ಗೃಹ, ಹೆಚ್ ಕೆ ಪಾಟೀಲ್- ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ,
ಕೆ.ಹೆಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ,
ಕೆ. ಜೆ ಜಾರ್ಜ್ - ಇಂಧನ,
ಎಂಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಐಟಿ ಬಿಟಿ,
ರಾಮಲಿಂಗಾರೆಡ್ಡಿ- ಸಾರಿಗೆ,
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ,
ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,
ಜಮೀರ್ ಅಹ್ಮದ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ,
ಕೃಷ್ಣ ಬೈರೇಗೌಡ- ಕಂದಾಯ,
ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ,
ಚಲುವರಾಯ ಸ್ವಾಮಿ- ಕೃಷಿ,
ಕೆ. ವೆಂಕಟೇಶ್- ಪಶು ಸಂಗೋಪನಾ ಮತ್ತು ರೇಷ್ಮೆ,
ಹೆಚ್.ಸಿ. ಮಹಾದೇವಪ್ಪ- ಸಮಾಜ ಕಲ್ಯಾಣ,
ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ,
ಎನ್ ರಾಜಣ್ಣ- ಸಹಕಾರ,
ಶರಣಬಸಪ್ಪ ದರ್ಶನ್ ಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು,
ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ,
ಆರ್. ಬಿ.ತಿಮ್ಮಾಪುರ್ ಅಬಕಾರಿ-ಮುಜರಾಯಿ,
ಎಸ್ ಎಸ್ ಮಲ್ಲಿಕಾರ್ಜುನ್- ಗಣಿ ಮತ್ತು ಭೂವಿಜ್ಞಾನ,
ಶಿವರಾಜ್ ತಂಗಡಗಿ- ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ,
ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ,
ಮಂಕಾಳ ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ,
ಲಕ್ಷ್ಮಿ ಹೆಬ್ಬಾಳ್ ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,
ರಹೀಂಖಾನ್- ಪೌರಾಡಳಿತ ಮತ್ತು ಹಜ್,
ಡಿ.ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ,
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ,
ಎನ್ ಎಸ್ ಬೋಸ್ ರಾಜ್- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ,
ಬೈರತಿ ಸುರೇಶ್- ನಗರಾಭಿವೃದ್ಧಿ, ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ,
ಎಂ.ಸಿ ಸುಧಾಕರ್- ವೈದ್ಯಕೀಯ ಶಿಕ್ಷಣ,
ಕೆ.ಎನ್ ರಾಜಣ್ಣ- ಸಹಕಾರ,
ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ,
ಬಿ. ನಾಗೇಂದ್ರ- ಯುವಜನ ಸೇವೆ, ಕ್ರೀಡೆ ಮತ್ತು ಸಂಸ್ಕೃತಿ ಖಾತೆ
ಈ ಪಟ್ಟಿಯನ್ನು ಈಗಾಗಲೇ ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ, ಅದರಲ್ಲಿ ಕೆಲವೊಂದು ಲೋಪ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗಿದೆ ಎನ್ನಲಾಗಿದೆ.
ಸಂಪುಟ ಸಚಿವರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ ಅಥವಾ ಭಾನುವಾರ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


