ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ: ‘ಖಾಲಿ ಕುರ್ಚಿ’ಗಳಿಗೆ ಯಾವ ಭಾಷೆಯಲ್ಲಿ ಸಂಬೋಧಿಸಿದರೇನು?
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಧ್ಯದ ವಾಕ್ಸಮರ ತಾರಕಕ್ಕೇರಿದೆ. ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ?

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಧ್ಯದ ವಾಕ್ಸಮರ ತಾರಕಕ್ಕೇರಿದೆ. ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಇದೇ ವಿಚಾರಕ್ಕೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ಕಲ್ಬುರ್ಗಿಯಲ್ಲಿ ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ. ಅಂದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ತಿರಸ್ಕೃತಗೊಂಡಿರುವ ಬಗ್ಗೆ ಸಾಕ್ಷಿ ಕಲೆಹಾಕಲು ಯಾತ್ರೆ ನಡೆಸಬೇಕೆಂದಿರಲಿಲ್ಲ’ ಎಂದು ಲೇವಡಿ ಮಾಡಿದೆ. ಸಿದ್ದರಾಮಯ್ಯ ಅವರು ಶುಕ್ರವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಗೈರಾಗಿದ್ದರು.
‘ನಾಡಭಾಷೆ ಕನ್ನಡವನ್ನು ತಿರಸ್ಕರಿಸಿ ಉರ್ದುವಿನಲ್ಲೇ ಭಾಷಣ ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್ ಕುಸಿಯುತ್ತಿರುವುದು, ಹುಂಬತನ ಪ್ರದರ್ಶಿಸುತ್ತಿರುವುದು ಅಚ್ಚರಿಯೇನಲ್ಲ. ಇಷ್ಟಕ್ಕೂ ಪ್ರಜಾದ್ರೋಹ ಯಾತ್ರೆಯ ಸಭೆಗಳಲ್ಲಿ ಸೇರುತ್ತಿದ್ದ ಅಪಾರ ಪ್ರಮಾಣದ ‘ಖಾಲಿ ಕುರ್ಚಿ’ಗಳಿಗೆ ಯಾವ ಭಾಷೆಯಲ್ಲಿ ಸಂಬೋಧಿಸಿದರೇನು’ ಎಂದು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಸರ್ಕಾರವು ಹಿಂದಿನಿಂದಲೂ ಗೂಂಡಾಗಳನ್ನು ಪೋಷಿಸುತ್ತಲೆ ಬಂದಿದೆ. ಪಕ್ಷದ ಆಯಕಟ್ಟಿನ ಜಾಗದಲ್ಲಿ ಸಮಾಜಘಾತುಕರನ್ನು ನೇಮಿಸಿದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜಘಾತುಕರಿಗೆ ಶೀಘ್ರವಾಗಿ ಬೇಲ್ ದೊರಕುವಂತೆ ಕಾನೂನು ರೂಪಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಮೈಶುಗರ್ ಕಾರ್ಖಾನೆ ಮುಚ್ಚುವುದರ ಮೂಲಕ ಮಂಡ್ಯ ಭಾಗದ ಕಬ್ಬು ಬೆಳೆಗಾರರ ಹೊಟ್ಟೆ ಮೇಲೆ ಹೊಡೆದು ಹಣ ಮಾಡಿಕೊಂಡ ನಾಯಕ ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


