ಪ್ರಜಾಧ್ವನಿ ಯಾತ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನ; ಪ್ರಜಾಧ್ವನಿ ಯಾತ್ರೆ ಸೇರಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳು ರದ್ದು
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಶನಿವಾರ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಅಪಾರ; ನಾನು ಸತ್ತರೆ ದೊಡ್ಡಾಲಹಳ್ಳಿ ಮಣ್ಣಿನಲ್ಲಿ ಹೂಳ್ತಾರೆ: ಡಿ.ಕೆ.ಶಿವಕುಮಾರ್
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು. ಇದನ್ನು ನೀವು ಆಲೋಚಿಸಬೇಕು ಎಂದು ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

'ಅಣ್ಣ' ಕೋಣನಾದ್ರೂ ಬಲಿ ಕೊಡ್ಲಿ, ನಿಂಬೆ ಹಣ್ಣನ್ನಾದ್ರೂ ಮಂತ್ರಿಸಿ ಇಟ್ಟುಕೊಳ್ಳಲಿ; ಪುತ್ರವ್ಯಾಮೋಹ ತಿರಸ್ಕರಿಸಿ ಇತಿಹಾಸ ಸೃಷ್ಟಿಸಿ!
ಈ ಪುತ್ರ ವ್ಯಾಮೋಹ ಯಾರನ್ನೂ ಬಿಡೋದಿಲ್ಲ. ಧೃತರಾಷ್ಟ್ರನ ಪುತ್ರ ಪ್ರೇಮದಿಂದಲೇ ಮಹಾಭಾರತ ನಡೆಯಿತು. ಒಂದು ಕಡೆ ಪಾಂಡವರು, ಇನ್ನೊಂದು ಕಡೆ ನೂರು ಮಂದಿ ಕೌರವರು. ಪಾಂಡವರು ಬರೀ ಐದು ಗ್ರಾಮ ಕೇಳ್ತಾರೆ.

ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ: ‘ಖಾಲಿ ಕುರ್ಚಿ’ಗಳಿಗೆ ಯಾವ ಭಾಷೆಯಲ್ಲಿ ಸಂಬೋಧಿಸಿದರೇನು?
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಧ್ಯದ ವಾಕ್ಸಮರ ತಾರಕಕ್ಕೇರಿದೆ. ಖಾಲಿ ಕುರ್ಚಿಗಳಿಗೆ ಸುಳ್ಳಿನ ತುತ್ತೂರಿ ಊದುವ ಬದಲು ಅಧಿವೇಶನಕ್ಕೆ ಹಾಜರಾಗುವುದು ಸೂಕ್ತವಲ್ಲವೇ?

ಕಲಬುರಗಿ: ಲಂಬಾಣಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ- ವಿಡಿಯೋ
ಕಲಬುರಗಿಯಲ್ಲಿಂದು ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಲಂಬಾಣಿ ಮಹಿಳೆಯೊಂದಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

ಪ್ರಜಾಧ್ವನಿ ಯಾತ್ರೆ ಎರಡನೇ ಹಂತದ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಹಾಲಿ ಶಾಸಕರಿಗೆ ಮಣೆ!
ಮೊದಲ ಪಟ್ಟಿಯಲ್ಲಿ ಸುಮಾರು 120 ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆಡಳಿತ ಪಕ್ಷವು ತನ್ನ ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸುವ ಮೂಲಕ ಸೇಫ್ ಗೇಮ್ ಆಡುತ್ತಿರುವ ಹಿನ್ನೆಲೆಯಲ್ಲಿ, ವಿರೋಧ ಪಕ್ಷ ಕಾಂಗ್ರೆಸ್ ಹಾಲಿ ಶಾಸಕರನ್ನು ಕೈಬಿಡಲು ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

'ನಿನ್ನ ಮನೆ ಹಾಳಾಗ..': ಕಾಂಗ್ರೆಸ್ ಸರ್ಕಾರದ ಯೋಜನೆ ಸ್ಥಗಿತಕ್ಕೆ ಸಿಎಂ ವಿರುದ್ಧ ಸಿದ್ದು ಗರಂ, ಸ್ವಪಕ್ಷೀಯರ ವೈಫಲ್ಯದ ಬಗ್ಗೆಯೂ ತೀವ್ರ ಅಸಮಾಧಾನ!
ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರ ವಿರುದ್ಧವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನ: ಪ್ರಜಾಧ್ವನಿ ಯಾತ್ರೆ ವೇಳೆ ಸಿದ್ದರಾಮಯ್ಯ ಮೇಲಿನ ಹಾಡನ್ನು ತಡೆದ ಡಿಕೆ ಸುರೇಶ್
ಸಂಸದ ಡಿ.ಕೆ ಸುರೇಶ್ ಸಿದ್ದರಾಮಯ್ಯ ಅವರ ಮೇಲಿನ ಹಾಡನ್ನು ಹಾಡದಂತೆ ಹಾಡುಗಾರನಿಗೆ ಸೂಚಿಸಿ ತಡೆದ ಘಟನೆ ಹಾಸನದ ಪ್ರಜಾಧ್ವನಿ ಯಾತ್ರೆ ವೇಳೆ ವರದಿಯಾಗಿದೆ.

