ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಹೋಗಿ ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ: ಕಾಂಗ್ರೆಸ್
ಇದೀಗ ಭ್ರಷ್ಟಾಚಾರ, ಯಾರು ಭ್ರಷ್ಟಾಚಾರಿಗಳು ಎಂಬ ವಾಗ್ಯುದ್ಧ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣ ಕೂನಲ್ಲಿ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆಯನ್ನು ಬಿಜೆಪಿಯ ಮುಂದಿಟ್ಟು ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು: ಇದೀಗ ಭ್ರಷ್ಟಾಚಾರ, ಯಾರು ಭ್ರಷ್ಟಾಚಾರಿಗಳು ಎಂಬ ವಾಗ್ಯುದ್ಧ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣ ಕೂನಲ್ಲಿ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆಯನ್ನು ಬಿಜೆಪಿಯ ಮುಂದಿಟ್ಟು ತರಾಟೆಗೆ ತೆಗೆದುಕೊಂಡಿದೆ. ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ ಎಂದು ಕಾಂಗ್ರೆಸ್ ಹೇಳಿದೆ.
#40PercentSarkaraದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಬ್ಲಾಕ್ಮೇಲ್ ತಂತ್ರ ಫಲಿಸದು. ಕಾಂಗ್ರೆಸ್‌ನ ಹಳೆಯ ಪ್ರಕರಣಗಳನ್ನು ಹಿಡಿಯುತ್ತೇವೆ ಎಂದಿದ್ದ ಬಿಜೆಪಿಯ ಎದುರೇ ಈಗ ಹಳೆಯ ಅಕ್ರಮದ ಭೂತ ಬಂದು ನಿಂತಿದೆ. BSY, BYV & ಎಸ್.ಟಿ ಸೋಮಶೇಖರ್ ವಿರುದ್ದದ ಪ್ರಕರಣಕ್ಕೆ ಉತ್ತರವೇನು, ಕ್ರಮವೇನು ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

#40PercentSarkaraದ ಕುಖ್ಯಾತಿ ದೇಶದೆಲ್ಲೆಡೆ ಪಸರಿಸಿದೆ! ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂಗೆ ತೆಲಂಗಾಣದಲ್ಲಿನ ಈ ಬೋರ್ಡ್‌ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ.
ಇದನ್ನೂ ಓದಿ: ಇತರ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ಮೋದಿ ಚಾಳಿ: ಕಾಂಗ್ರೆಸ್ ಕಿಡಿ
ಮದಕರಿ ನಾಯಕ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ 6500 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುತ್ತೇವೆ ಎಂದಿತ್ತು ಬಿಜೆಪಿ. ಈಗಾಗಲೇ ಇರುವ ವಸತಿ ಯೋಜನೆಗಳಿಗೆ ಹಣ ನೀಡಿಲ್ಲ, ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ. ಕೊಟ್ಟ ಮಾತನ್ನೂ ಪೂರೈಸಿಲ್ಲ. ಇಂತಹಾ ಮಹಾಮೋಸ ಮಾಡಿದ್ದೇಕೆ
ಇತರ ಸರ್ಕಾರಗಳು ಮಾಡಿದ ಯೋಜನೆಗಳಿಗೆ ಹೆಸರು ಬದಲಿಸುವುದು, ಕ್ರೆಡಿಟ್ ತೆಗೆದುಕೊಳ್ಳುವುದನ್ನೇ ಚಾಳಿ ಮಾಡಿಕೊಂಡಿರುವ ಪ್ರಧಾನಿ @narendramodi ಅವರು ಚೀತಾಗಳನ್ನು ತರಲು ಯಾರೂ ಪ್ರಯತ್ನಿಸಲೇ ಇಲ್ಲ ಎಂದಿದ್ದರು. ಚೀತಾಗಳು ಭಾರತಕ್ಕೆ ಬರುವ ಹಿಂದಿರುವ ಕಾಂಗ್ರೆಸ್ ಪ್ರಯತ್ನಗಳನ್ನು ಪ್ರಧಾನಿ ಅರಿಯಲಿ, ನಂತರ ಕ್ಯಾಮೆರಾ ಹಿಡಿದು ಪೋಸ್ ಕೊಡಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


