ಇತರ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ಮೋದಿ ಚಾಳಿ: ಕಾಂಗ್ರೆಸ್ ಕಿಡಿ
ಇತರ ಸರ್ಕಾರಗಳ ಯೋಜನೆಗಳಿಗೆ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಚಾಳಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿಯಾಗಿದೆ.

ಬೆಂಗಳೂರು: ಇತರ ಸರ್ಕಾರಗಳ ಯೋಜನೆಗಳಿಗೆ ಹೆಸರು ಬದಲಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಚಾಳಿಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿಯಾಗಿದೆ.
ಚೀತಾಗಳು ಭಾರತಕ್ಕೆ ಬರುವ ಹಿಂದಿರುವ ಕಾಂಗ್ರೆಸ್ ಪ್ರಯತ್ನಗಳ ಪಟ್ಟಿ ನೀಡಿರುವ ಕಾಂಗ್ರೆಸ್, ಇದನ್ನು ಪ್ರಧಾನಿ ಅರಿಯಲಿ, ನಂತರ ಕ್ಯಾಮೆರಾ ಹಿಡಿದು ಪೋಸ್ ಕೊಡಲಿ ಎಂದು ಹೇಳಿದೆ.
ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರುವ ಪ್ರಸ್ತಾವ 2009ರಲ್ಲಿಯೇ ಸಿದ್ದಪಡಿಸಲಾಗಿತ್ತು. 2010 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಮನ ಮೋಹನ್ ಸಿಂಗ್ ಅವರು ಚೀತಾ ಯೋಜನೆಗೆ ಅನುಮತಿ ನೀಡಿದ್ದರು ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತಿಳಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಇದ್ದ ಪ್ರಜ್ಞಾವಂತರ ನಾಡು, ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಕಳೆದು ಭ್ರಷ್ಟಾಚಾರದ ರಾಜ್ಯ ಎಂಬ ಹಣೆಪಟ್ಟಿ ಬಂದಿದ್ದು ದುರದೃಷ್ಟಕರ. ಭ್ರಷ್ಟಾಚಾರದ ಮಹಾಪೋಷಕರಾದ ಸಿಎಂಗೆ ತೆಲಂಗಾಣದಲ್ಲಿ ಹಾಕಿದ್ದ ಬೋರ್ಡ್‌ಗಳನ್ನು ವಿರೋಧಿಸುವ ದಮ್ ಇಲ್ಲದಾಗಿದೆ ಎಂದು ಟೀಕಿಸಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ '40 ಪರ್ಸೆಂಟ್ ಸರ್ಕಾರ' ಎಂಬ ಫ್ಲೆಕ್ಸ್ ಅಳವಡಿಕೆ: ಸೌಹಾರ್ದತೆಗೆ ಧಕ್ಕೆ ಎಂದ ಸಿಎಂ ಬೊಮ್ಮಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


