ರಾಜಕೀಯ

ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದ: ಶೂನ್ಯವೇಳೆಯಲ್ಲಿ ಸ್ಪೀಕರ್ ಕಾಗೇರಿ ಗರಂ!

ವಿಧಾನಸಭೆಯ ಕಾರ್ಯಕಲಾಪಗಳಿಗೆ ಪದೇ, ಪದೇ ಅಡ್ಡಿಪಡಿಸುವ, ಸದನವನ್ನು ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಸಬೇಕು ಎಂದು ನಿಯಂತ್ರಣ ಮಾಡಿ, ಅನುಚಿತವಾಗಿ ವರ್ತಿಸಿ ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದವಾಗಿದೆ.

ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದ: ಶೂನ್ಯವೇಳೆಯಲ್ಲಿ ಸ್ಪೀಕರ್ ಕಾಗೇರಿ ಗರಂ!
ವಿಶ್ವೇಶ್ವರ ಹೆಗಡೆ ಕಾಗೇರಿ
Published On :

ಬೆಂಗಳೂರು: ವಿಧಾನಸಭೆಯ ಕಾರ್ಯಕಲಾಪಗಳಿಗೆ ಪದೇ, ಪದೇ ಅಡ್ಡಿಪಡಿಸುವ, ಸದನವನ್ನು ಹೀಗೆ ತಮ್ಮ ಮೂಗಿನ ನೇರಕ್ಕೆ ನಡೆಸಬೇಕು ಎಂದು ನಿಯಂತ್ರಣ ಮಾಡಿ, ಅನುಚಿತವಾಗಿ ವರ್ತಿಸಿ ಸದನದ ಸಮಯ ಹಾಳು ಮಾಡುವ ಸದಸ್ಯರ ಪಟ್ಟಿ ಸಿದ್ದವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಎಚ್ಚರಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯರಾದ ಶಿವಲಿಂಗೇಗೌಡ, ಅನ್ನದಾನಿ, ಬಂಡೆಪ್ಪ ಕಾಶಂಪೂರ್ ಮತ್ತಿತರರು ಎದ್ದು ವಿಷಯ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಾಗ ಸ್ಪೀಕರ್ ಕಾಗೇರಿ ಗರಂ ಆದರು.

ಸದನದ ಕಾರ್ಯಕಲಾಪಗಳನ್ನು ನಡೆಸುವ ಗುರುತರ ಹೊಣೆಗಾರಿಕೆ ನನ್ನ ಮೇಲಿದೆ. ಆದರೆ, ಸದನದ ನಾಯಕರ ಸಹಕಾರ ಇಲ್ಲದೇ ನಾನೊಬ್ಬನೇ ಏಕಾಂಗಿಯಾಗಿ ನಿರ್ವಹಣೆ ಮಾಡುವುದು ಸಾಧ್ಯವಿಲ್ಲ. ಬಹಳ ಭಾರವಾದ ಮನಸ್ಸಿನಿಂದ ಅನುಚಿತ ಸದಸ್ಯರಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಇದು ನನಗೆ ಸಂತೋಷ, ನೆಮ್ಮದಿ, ಸಮಾಧಾನ ಕೊಡುವ ವಿಚಾರ ಅಲ್ಲ. ಆದರೆ ಸದಸ್ಯರು ಮೀತಿ ವರ್ತಿಸಿದರೆ ನಾನು ಮೌನಕ್ಕೆ ಶರಣಾಗಲಾರೆ. ಕಠಿಣ ಕ್ರಮ ಜರುಗಿಸುವುದಾಗಿ ಸ್ಪೀಕರ್ ನೇರ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.