Jds MLA

ನೀರಿಗಾಗಿ ಬೋರ್ವೆಲ್ ಕೊರೆಸಿದ್ರೆ ಕೆಮಿಕಲ್ ಬರ್ತಿದೆ; ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಿಸಲು ಸರ್ಕಾರದ ಬಳಿ ಹಣವಿಲ್ಲ: ಶರಣಗೌಡ ಕಂದಕೂರು
ಭೀಮಾ ನದಿಯು ಹತ್ತಿರದಲ್ಲೇ ಇದ್ದರೂ ಮತ್ತು ಕುಡಿಯುವ ನೀರಿಗಾಗಿ ಹಲವಾರು ಜಿಲ್ಲೆಗಳು ಅದರ ಮೇಲೆ ಅವಲಂಬಿತವಾಗಿದ್ದರೂ, ತಮಗೆ ಸಾಕಷ್ಟು ನೀರು ಸಿಗುತ್ತಿಲ್ಲ ಎಂದು ಕಂದಕೂರು ಗಮನ ಸೆಳೆದರು.

ಪ್ರಗತಿ ಪರಿಶೀಲನಾ ಸಭೆ: ತಾಳ್ಮೆ ಕಳೆದುಕೊಂಡು ಅಧಿಕಾರಿ ಮೇಲೆ ರೇಗಿದ ಜೆಡಿಎಸ್ ಶಾಸಕ ಮಂಜು; Video
ಸ್ಥಳೀಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ CESC ಅಧಿಕಾರಿಗಳು ಗಮನಹರಿಸಿ, ಅವುಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂಬ ಆರೋಪದಿಂದ ಶಾಸಕ ಮಂಜು ತೀವ್ರ ಅಸಮಾಧಾನಗೊಂಡಿದ್ದರು.

ರಾಯಚೂರು: ಕರ್ತವ್ಯ ನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪುತ್ರನಿಂದ ಹಲ್ಲೆ
ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಕರೆಮ್ಮ ಜೆ. ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮರೆಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾಸ್ ಸೇರಿ 15ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲ್ಲೆ ನಡೆಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಹಿನ್ನಡೆ: ಜೆಡಿಎಸ್ ಶಾಸಕ ವೆಂಕಟಶಿವ ರೆಡ್ಡಿ ವಿರುದ್ಧದ ಮಾನನಷ್ಟ ಮೊಕದ್ದಮೆ ಖುಲಾಸೆ
ಮಾಜಿ ವಿಧಾನಸಭಾ ಸ್ಪೀಕರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಕೆಆರ್ ರಮೇಶ್ ಕುಮಾರ್ ಜೆಡಿಎಸ್ ಶಾಸಕ ಜಿಕೆ ವೆಂಕಟಶಿವ ರೆಡ್ಡಿ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಿಂದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮೇಲೆ ಮುದ್ದಾಟ, ಒಳಗೊಳಗೆ ಗುದ್ದಾಟ: ಬಿಜೆಪಿ ನಾಯಕರ ಆಸ್ತಿಯಲ್ಲಿ ಕೆಪಿಟಿಸಿಎಲ್ ಕಚೇರಿ; ಜೆಡಿಎಸ್ ಶಾಸಕರ ವಿರೋಧ
2024ರ ಲೋಕಸಭೆ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಎರಡೂ ಪಕ್ಷಗಳ ನಾಯಕರು ಕಿತ್ತಾಡುತ್ತಲೇ ಇದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಬಿ.ಸುರೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯೊಂದಿಗಿನ ಮೈತ್ರಿ ತಂದ ಸಂಕಷ್ಟ; ಭಿನ್ನಮತ ಶಮನಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಯತ್ನ, ಅತೃಪ್ತ ಶಾಸಕರ ಮನವೊಲಿಕೆ
ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಕ್ಷದ ಗುರುಮಿಠಕಲ್ ಶಾಸಕ ಶರಣಗೌಡ ಪಾಟೀಲ್ ಕಂದಕೂರ ಅವರ ಮನವೊಲಿಸುವಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಶಾಸಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಎಂಟು ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರಿಯಮ್ಮ ಜಿ.ನಾಯಕ್ ಅವರನ್ನು ನಿಂದಿಸಿದ ಆರೋಪದ ಮೇಲೆ ಎಂಟು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

'19 ಸೀಟು 119 ಆಗುವ ದಿಕ್ಕಿನಲ್ಲಿ ಕೆಲಸ ಮಾಡೋಣ: ಒಬ್ಬನೇ ಎಂದು ಕೈಕಟ್ಟಿ ಕೂತಿದ್ದರೆ ಕಾವೇರಿ ನೀರಿನ ಸದ್ಬಳಕೆ ಆಗುತ್ತಿತ್ತಾ?'
ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎಂದು ಎದೆಗುಂದಬೇಕಾಗಿಲ್ಲ. ಹಿಂದಿನ ಲೋಕಸಭೆಯಲ್ಲಿಯೂ ಪಕ್ಷದ ಪರವಾಗಿ ಒಬ್ಬನೇ ಇದ್ದೆ. ಈಗಲೂ ನಮಗೆ ಒಬ್ಬರೇ ಸಂಸದರಿದ್ದಾರೆ. ಹಾಗಂತ ನಮ್ಮ ಹೋರಾಟದ ಕಿಚ್ಚು ಕಡಿಮೆಯಾಗಿದೆಯಾ .

ಜೆಡಿಎಸ್ ಮತ್ತೊಂದು ವಿಕೆಟ್ ಪತನ: ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ರಾಜಿನಾಮೆ
ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.

