ಉಪ ಚುನಾವಣೆಯಲ್ಲಿ ಗೆದ್ದರೆ ಅತಿ ಹಿರಿಯ ಶಾಸಕನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಟಿಬಿ ಜಯಚಂದ್ರ!
ಶಿರಾ ಉಪ ಚುನಾವಣೆಯಲ್ಲಿ ಒಂದು ವೇಳೆ ಗೆಲುವು ಸಾಧಿಸಿದರೇ 71 ವರ್ಷದ ಟಿಬಿ ಜಯಚಂದ್ರ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ಒಂದು ವೇಳೆ ಗೆಲುವು ಸಾಧಿಸಿದರೇ 71 ವರ್ಷದ ಟಿಬಿ ಜಯಚಂದ್ರ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸದ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಾಗಿದ್ದಾರೆ ಅದಾದ ನಂತರದ ಸ್ಥಾನ ಜಯಚಂದ್ರ ಪಡೆಯಲಿದ್ದಾರೆ.
ಖರ್ಗೆ 1972 ರಲ್ಲಿ ವಿಧಾನಸಭೆ ಪ್ರವೇಶಿಸಿದರೇ ಜಯಚಂದ್ರ 1978 ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಅವರು 27 ವರ್ಷ ವಯಸ್ಸಿನವರಾಗಿದ್ದಾಗ ಕಳ್ಳಂಬೆಳ್ಳ ವಿಧಾನ ಸಭೆ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಿದರು. ಅದಾದ ನಂತರ ಕಳ್ಳಂಬೆಳ್ಳ ವಿಧಾನ ಸಭೆ ಕ್ಷೇತ್ರವನ್ನು 2008 ರಲ್ಲಿ ವಿಲೀನಗೊಳಿಸಲಾಯಿತು.
ಬಿಎಸ್ ಸಿ ಮತ್ತು ಕಾನೂನು ಪದವೀಧರರಾಗಿರುವ ಜಯಚಂದ್ರ 10ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಬಾರಿ ಸೋತಿರುವ ಜಯಚಂದ್ರ ವಿಧಾನಸಭೆಯಲ್ಲಿ ಅತಿ ಹಿರಿಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಅವರ ಪುತ್ರ ಟಿಜೆ ಸಂತೋಷ್ 2018 ವಿಧಾನಸಭೆ ಚುನಾವಣೆಯಲ್ಲಿ ಶಿರಾದಿಂದ ಸ್ಪರ್ಧಿಸಿದ್ದು ಸೋಲನುಭವಿಸಿದ್ದರು. ಅಪ್ಪ -ಮಗ ಇಬ್ಬರು ಸ್ಪರ್ಧಿಸುವುದು ಹಿಂದುಳಿದ ಸಮುದಾಯವಾದ ಕಾಡುಗೊಲ್ಲ ಮತ್ತು ಕುರುಬ ಸಮುದಾಯಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ಇಬ್ಬರಿಗೂ ಪಾಠ ಕಲಿಸಿದ್ದರು. ಜೆಡಿಎಸ್ ನ ಬಿ ಸತ್ಯ ನಾರಾಯಣ ಅವರಿಗೆ ಅನುಕಂಪದ ಮತಗಳು ಬಿದ್ದಿದ್ದವು.
ಶಿರಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆದಿವೆ, ಟಿಬಿ ಜಯಚಂದ್ರ 2004 ಮತ್ತು 2018 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಸದ್ಯ ಅವರ ರಾಜಕೀಯ ವೈರಿ ಕೆಎನ್ ರಾಜಣ್ಣ ಜಯಚಂದ್ರ ವಿರುದ್ಧ ಗುಟುರು ಹಾಕಿದ್ದಾರೆ, ಪರಿಸ್ಥಿತಿ ಹೀಗಿದ್ದರೂ ತಾವು ಗೆಲ್ಲುವುದಾಗಿ ಜಯಚಂದ್ರ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


