ರಾಜಕೀಯ

ನಾವು ಬಸವರಾಜು, ಮುನಿರತ್ನ 'ಎಸ್ ಬಿಎಂ' ಒಂದೇ, ಬೇರೆ ಬೇರೆ  ಅಲ್ಲ: ಸಚಿವ ಸೋಮಶೇಖರ್

ನಾವು ಎಸ್ ಬಿಎಂ ಒಂದೇ. ಬೇರೆ ಬೇರೆ ಅಲ್ಲ. ಶಾಸಕರಾದ ಮುನಿರತ್ನ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಎಸ್ ಬಿಎಂ ಒಂದೇ ಆಗಿದ್ದೇವೆ. ನಾವು ಬೇರೆ ಅಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.

ನಾವು ಬಸವರಾಜು, ಮುನಿರತ್ನ 'ಎಸ್ ಬಿಎಂ' ಒಂದೇ, ಬೇರೆ ಬೇರೆ  ಅಲ್ಲ: ಸಚಿವ ಸೋಮಶೇಖರ್
ಎಸ್ ಟಿ ಸೋಮಶೇಖರ್
Published On :

ತುಮಕೂರು: ನಾವು ಎಸ್ ಬಿಎಂ ಒಂದೇ. ಬೇರೆ ಬೇರೆ ಅಲ್ಲ. ಶಾಸಕರಾದ ಮುನಿರತ್ನ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಎಸ್ ಬಿಎಂ ಒಂದೇ ಆಗಿದ್ದೇವೆ. ನಾವು ಬೇರೆ ಅಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಆಗ ನಡೆದ ಚುನಾವಣೆಯಲ್ಲಿ ನಾನು, ಬೈರತಿ ಬಸವರಾಜು ಅವರು ಗೆದ್ದು ಮಂತ್ರಿ ಆಗಿದ್ದೇವೆ. ಆಗ ಎಸ್ ಬಿ ಎಂದು ಕರೆಯಲ್ಪಟ್ಟೆವು. ಮುನಿರತ್ನ ಅವರು ಮಂತ್ರಿಯಾದಾಗ ಮತ್ತೆ ಎಸ್ ಬಿಎಂ ಎಂದು ನೀವೇ ಹೇಳುತ್ತೀರ ಎಂದು ಪ್ರಶ್ನಿಸಿದರು.

ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಕೊಟ್ಟ ಮಾತಿಗೆ ಎಂದೂ ತಪ್ಪಿಲ್ಲ. ಮಾತು ಕೊಟ್ಟಂತೆ ಸೋತ ವರಿಗೂ ಸಹ ಮಂತ್ರಿ ಸ್ಥಾನವನ್ನು ಕೊಟ್ಟವರು ಅವರು. ಹೀಗಾಗಿ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ.

ಆರ್.ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ಸೇರಿದಂತೆ ಐವರು ಸಚಿವ ಸ್ಥಾನದ ಆಕಾಂಕ್ಷಿತರಿದ್ದಾರೆ. ಹೀಗಾಗಿ ಪಕ್ಷದ ಎಲ್ಲರಿಗೂ ಸೂಕ್ತ ಸಂದರ್ಭದಲ್ಲಿ ಸ್ಥಾನ ನೀಡಬೇಕು. ಪಕ್ಷದಲ್ಲಿ ಮೊದಲಿನಿಂದಲೂ ದುಡಿದವರು ಸಹ ಇದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಡಿವಿ ಸದಾನಂದಗೌಡ ಅವರು ಮಾತನಾಡಿರಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.