ರಾಜಕೀಯ

ಬಿಜೆಪಿ ಅಧಿಕಾರಕ್ಕೆ ತರಲು ವಿಶ್ವನಾಥ್, ಎಂಟಿಬಿ ಮಾಡಿದ ತ್ಯಾಗವನ್ನು ಯಡಿಯೂರಪ್ಪ ಮರೆಯಲ್ಲ: ಸೋಮಣ್ಣ

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿಶ್ವನಾಥ್ ಹಾಗೂ ಎಂಟಿ ನಾಗರಾಜ್ ಅವರ ತ್ಯಾಗವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿರುವ ವಸತಿ ಸಚಿವ ವಿ.ಸೋಮಣ್ಣ, ಮುಂದಿನ ವರ್ಷ ಸಚಿವ ಸಂಪುಟ ಪರಿಷ್ಕರಣೆ ವೇಳೆ ಮತ್ತಷ್ಟು ಜನರಿಗೆ ಅವಕಾಶ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ತರಲು ವಿಶ್ವನಾಥ್, ಎಂಟಿಬಿ ಮಾಡಿದ ತ್ಯಾಗವನ್ನು ಯಡಿಯೂರಪ್ಪ ಮರೆಯಲ್ಲ: ಸೋಮಣ್ಣ
ಸೋಮಣ್ಣ
Published On :

ಮೈಸೂರು: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿಶ್ವನಾಥ್ ಹಾಗೂ ಎಂಟಿ ನಾಗರಾಜ್ ಅವರ ತ್ಯಾಗವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿರುವ ವಸತಿ ಸಚಿವ ವಿ.ಸೋಮಣ್ಣ, ಮುಂದಿನ ವರ್ಷ ಸಚಿವ ಸಂಪುಟ ಪರಿಷ್ಕರಣೆ ವೇಳೆ ಮತ್ತಷ್ಟು ಜನರಿಗೆ ಅವಕಾಶ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪೂರ್ತಿ ಭರ್ತಿಯಾಗುತ್ತದೆ. ಪರಿಸ್ಥಿತಿ ಕೈಕೊಟ್ಟಿದ್ದರಿಂದ ಸ್ವಲ್ಪ ಏರುಪೇರಾಗಿದೆ ಅಷ್ಟೇ. ಕೊನೆಗೆ ಎಲ್ಲಾ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿಗಳು ಅವರು ಎಲ್ಲಾ ಸಂದರ್ಭದಲ್ಲೂ ಒಬ್ಬರೇ ಸರ್ಕಾರ ನಿಭಾಯಿಸಿದ್ದಾರೆ. ಮುಂದೆಯೂ ಎಲ್ಲವನ್ನೂ ನಿಭಾಯಿಸುತ್ತಾರೆ. ವಿಶ್ವನಾಥ್ ಬುದ್ಧಿವಂತರು ಜೊತೆಗೆ ಸಿಎಂಗೂ ಆಪ್ತರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ನೋವಿರುವುದು ನಿಜ. ಈ ಬಗ್ಗೆ ಸಿಎಂ ಹಾಗೂ ವಿಶ್ವನಾಥ್ ಕಳಿತು ಚರ್ಚೆ ಮಾಡುತ್ತಾರೆ. ಮುಂದಿನ ವರ್ಷ ಸಚಿವ ಸಂಪುಟ ಪರಿಷ್ಕರಣೆಯಾಗಿ ಮತ್ತಷ್ಟು ಜನರಿಗೆ ಅವಕಾಶ ದೊರೆಯಲಿದೆ. ಮುಖ್ಯಮಂತ್ರಿ ಅವರು ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.