ಎಂಟಿಬಿ ನಾಗರಾಜ್

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದವನನ್ನು MLC ಮಾಡಿದ್ರು; ಜನರ ಕಷ್ಟ-ಸುಖ ಕೇಳದ ಆತನಿಗೆ ಧಮ್ ಇಲ್ಲ, ಧೈರ್ಯವಿಲ್ಲ: ಡಿಕೆಶಿ
ಉಪಕಾರ ಎನ್ನುವುದು ಪುಸ್ತಕದಲ್ಲಿ ಇರುವುದಿಲ್ಲ, ಮಾಡುವ ಮನಸ್ಸಿನಲ್ಲಿರುತ್ತದೆ. ಈ ಭಾಗದ ಒಬ್ಬ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದ. ಎಂಎಲ್ ಸಿ ಮಾಡಿದರು. ಆದರೆ ಒಂದೇ ಒಂದು ದಿನ ಜನರ ಕಷ್ಟ ಸುಖ ಕೇಳುತ್ತಿಲ್ಲ.

ಅವನು ಸೋತ, ನಮ್ಮನ್ನೂ ಸೋಲಿಸಿದ: ಮತ್ತೆ ಮಾಜಿ ಸಚಿವ ಕಿಡಿ, ಸೋಲಿನಿಂದ ಹೊರಬಾರದ ಎಂಬಿಟಿ ನಾಗರಾಜ್!
ಮಾಜಿ ಸಚಿವ ಎಂಟಿಬಿ ನಾಗರಾಜ್ ಸೋಲಿನಿಂದ ಆಚೆ ಬಂದಂತೆ ಕಾಣುತ್ತಿಲ್ಲ. ಪದೇ ಪದೇ ತಮ್ಮ ಸೋಲಿನ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.

ಬಿಜೆಪಿ ಸೇರಲು ಸಿದ್ದರಾಮಯ್ಯ ಪ್ರೇರಣೆ: ಸುಧಾಕರ್ ಹೇಳಿಕೆ ಸತ್ಯಕ್ಕೆ ದೂರ ಎಂದ ಎಂಟಿಬಿ
ಸದ್ಯ ಮುಖ್ಯಮಂತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಮಾಜಿ ಸಚಿವ ಎಂ.ಟಿಬಿ ನಾಗರಾಜ್ ಅವರು ಬುಧವಾರ ಹೇಳಿದ್ದಾರೆ.

ಹೊಸಕೋಟೆ: ಎಂಟಿಬಿ ನಾಗರಾಜ್-ಶರತ್ ಬಚ್ಚೇಗೌಡ ಜಟಾಪಟಿ; ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಪಡೆಯಲು ಪೈಪೋಟಿ!
'ಸಂಸದ ಬಚ್ಚೇಗೌಡರು ತಾವರೆಕೆರೆಗೆ ಏನು ಅಭಿವೃದ್ಧಿ ಮಾಡಿದ್ದಾರೆ. ನಾನು ತಾವರೆಕೆರೆಯಲ್ಲಿ 5 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದರು.

248 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ರೂ.8691 ಕೋಟಿ ಮೊತ್ತದ ಯೋಜನೆ- ಎಂಟಿಬಿ ನಾಗರಾಜ್
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಅಮೃತ-2.0 ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

'ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ'ಯಡಿ 5,188 ಮನೆಗಳ ನಿರ್ಮಾಣ: ರಾಜ್ಯ ಸರ್ಕಾರ
ಪೌರಕಾರ್ಮಿಕರಿಗೆ ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ ಕರ್ನಾಟಕದಲ್ಲಿ ಒಟ್ಟು 5,188 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್ ಅವರು ಮಂಗಳವಾರ ಹೇಳಿದರು.

ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ, ಅದಕ್ಕೆ ಜನ ನನ್ನನ್ನು ಸೋಲಿಸಿದರು: ಎಂಟಿಬಿ ನಾಗರಾಜ್
ನಾನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ. ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು ಸೋಲಿಸಿಬಿಟ್ಟರು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಶನಿವಾರ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ.

ವಿಶ್ವ ಶೌಚಾಲಯ ದಿನ; ನಗರಗಳ ಸ್ವಚ್ಚತೆ ಕಾಪಾಡಲು ತಂತ್ರಜ್ಞಾನ ಬಳಕೆಗೆ ಆದ್ಯತೆ- ಸಚಿವ ಎಂಟಿಬಿ ನಾಗರಾಜ್
ನಗರಗಳಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದು ಅತ್ಯವಶ್ಯಕವಾಗಿದೆ. ನಗರಾಭಿವೃದ್ದಿಗೆ ಹೆಚ್ಚು ಒತ್ತು ನೀಡಿ ತ್ಯಾಜ್ಯ ನೀರು ಸಂಸ್ಕರಣೆ, ಘನತ್ಯಾಜ್ಯ ವಿಲೇವಾರಿ ಹಾಗೂ ನಗರಗಳ ಸ್ವಚ್ಚತೆ ಕಡೆಗೆ ಹೆಚ್ಚಿನ ಆಧ್ಯತೆ ನೀಡುವುದು ಅನಿವಾರ್ಯವಾಗಿದೆ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಎಂಟಿಬಿ ಆಡಿಯೋ ಕ್ಲಿಪ್'ನಿಂದ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ಸಾಬೀತಾಗಿದೆ: ಡಿಕೆಶಿ
ಎಂಟಿಬಿ ಆಡಿಯೋ ಕ್ಲಿಪ್'ನಿಂದ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷಧ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಆರೋಪಿಸಿದ್ದಾರೆ.

