ರಾಜಕೀಯ

'ಆವತ್ತು ಸಿದ್ದರಾಮಯ್ಯ ಎದೆಯಲ್ಲಿದ್ದದ್ದು ನಿಜ, ಈಗ ಸೈಡಿಗಿಟ್ಟಿದ್ದೇನೆ'

ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂತ ಹೇಳಿದ್ದು ನಿಜ. ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

'ಆವತ್ತು ಸಿದ್ದರಾಮಯ್ಯ ಎದೆಯಲ್ಲಿದ್ದದ್ದು ನಿಜ, ಈಗ ಸೈಡಿಗಿಟ್ಟಿದ್ದೇನೆ'
ಸಿದ್ದರಾಮಯ್ಯ
Published On :

ಬೆಂಗಳೂರು: ಅವತ್ತು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಅಂತ ಹೇಳಿದ್ದು ನಿಜ. ಆದರೆ ಈಗ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಮೊದಲು ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳಿದ್ದು ನಿಜ. ಇದೀಗ ಅವರನ್ನು ಆ ಸ್ಥಳದಿಂದ ಎತ್ತಿ ಪಕ್ಕದಲ್ಲಿ ಇಟ್ಟಿದ್ದೇನೆ. ಹೃದಯದಲ್ಲಿ ಮತ ನೀಡುವ ಮತದಾರರಿದ್ದಾರೆ. ಸಿದ್ದರಾಮಯ್ಯ ಜಾಗಕ್ಕೆ ಯಾರು ಬಂದಿಲ್ಲ ಎಂದು ಹೇಳಿದರು.

ಹೋಸಕೋಟೆ ಉಪ ಚುನಾವವಣೆಗೆ ನಾನೇ ನಿಲ್ಲುತ್ತೇನೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಹಿಂದೆ ರಾಜಕೀಯ ನಿವೃತ್ತ ಬಗ್ಗೆ ಮಾತನಾಡಿದ್ದರು.

ಅನರ್ಹಗೊಂಡಿರುವ ಶಾಸಕರು ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಮಾತನಾಡಿದ್ದೇವೆ. ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ಮೊದಲು ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.