ಹೊಸಕೋಟೆ

ಹೊಸಕೋಟೆಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!
ಶನಿವಾರ ರಾತ್ರಿ ಸುಮಾರು 11.30ರ ವೇಳೆಗೆ ಈ ಘಟನೆ ನಡೆದಿದೆ. ಊಟ ಮುಗಿಸಿ ಮನೆಯಿಂದ ಹೊರಬಂದಿದ್ದ ಖಲೀಮುಲ್ಲಾ ಖಾನ್ ಮೇಲೆ ಮನೆ ಸಮೀಪವೇ ಹೊಂಚುಹಾಕಿ ಕಾದಿದ್ದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಜಾಲಿರೈಡ್ ಗೆಂದು ಹೋದವರು ಜವರಾಯನ ಪಾದ ಸೇರಿದರು; ಹೊಸಕೋಟೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪೋಷಕರ ಆಕ್ರಂದನ; Video
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 6 ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಸ್ಥಳದಲ್ಲೇ 7 ಮಂದಿ ಸಾವು; Video
ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್ ಯುವಿ ಕಾರಿನ (XUV Car) ನಡುವೆ ಸರಣಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.

ಬೆಂಗಳೂರು ಕಳಪೆ ರಸ್ತೆ ಅವಾಂತರ: ಕೈವಾರ ತಾತಯ್ಯನಿಗೆ ಹೋಗಿ ಬರುತ್ತಿದ್ದ ಸಹೋದರಿಯರು ದುರ್ಮರಣ!
ರಸ್ತೆ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ರಸ್ತೆಯ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದವು. ಯುವತಿಯರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವು ಜಲ್ಲಿಕಲ್ಲುಗಳ ಮೇಲೆ ಹರಿದು ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕೆಳಗೆ ಬಿದ್ದಿದೆ.

ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಭೀಕರ ಅಪಘಾತ: ನಾಲ್ವರು ಸಾವು
ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಪತಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರ ಸಾರಿಗೆ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಅಪಘಾತ ನಡೆದಿದೆ.

Invest Karnataka 2025: ಹೊಸಕೋಟೆಯಲ್ಲಿನ ವೋಲ್ವೋ ಉತ್ಪಾದನಾ ಘಟಕ ವಿಸ್ತರಣೆ; ₹1,400 ಕೋಟಿ ಹೂಡಿಕೆ
ಈ ಸಂಬಂಧ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಬೆಂಗಳೂರು: ಹೊಸಕೋಟೆಯಲ್ಲಿ ನಾಡಬಾಂಬ್ ಸ್ಫೋಟ; ಮಗ ಸಾವು, ತಂದೆ ಸ್ಥಿತಿ ಗಂಭೀರ
ಮೃತ ಯುವಕನನ್ನು ದೊಡ್ಡನಲ್ಲಾಳ ಗ್ರಾಮದ ಪವನ್(19) ಎಂದು ಗುರುತಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ವಾವಣಿ ಛಿದ್ರ ಛಿದ್ರವಾಗಿದೆ.

ಹೊಸಕೋಟೆ: ಕೊಲೆ ಆರೋಪಿ ಮನೆ ಮೇಲೆ ಕುಟುಂಬಸ್ಥರ ದಾಳಿ, ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿ
ಜೂನ್ 16ರಂದು ಬೆಳಗ್ಗೆ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಗಾಪುರ ಗ್ರಾಮದ ನವೀನ್ ನಾಯಕ್ ಎಂಬಾತನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಬರ್ಬರವಾಗಿ ಕೊಲೆಗೈದಿದ್ದರು. ತರಕಾರಿ ತರುತ್ತಿದ್ದ ನವೀನ್ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನ: ಮತ್ತೆರಡು ಬೈಕ್ಗಳಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರ ಸಾವು
ಅಪಘಾತ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸಕೋಟೆ-ಚಿಂತಾಮಣಿ ರಾಜ್ಯಹೆದ್ದಾರಿಯಲ್ಲಿ ಗುರುವಾರ ನಡೆದಿದೆ.

