ಜೈಲಿಗೆ ಹೋಗಿ ಬಂದ ನಂತರ ಹೆಚ್ಚಾದ ಸ್ಟಾರ್ ವರ್ಚಸ್ಸು: ಡಿಕೆಶಿ ಪ್ರಚಾರಕ್ಕೆ ಬೇಡಿಕೆ
ಜೈಲಿಗೆ ಹೋಗಿ ಬಂದ ನಂತರ ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಅವರ ಸ್ಟಾರ್ ಮೌಲ್ಯ ಹೆಚ್ಚಾಗಿದ್ದು,ಡಿಸೆಂಬರ್ 9 ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸುವಂತೆ ಪಕ್ಷದ ಅಭ್ಯರ್ಥಿಗಳು ಡಿಕೆಶಿ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಬೆಂಗಳೂರು: ಜೈಲಿಗೆ ಹೋಗಿ ಬಂದ ನಂತರ ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಅವರ ಸ್ಟಾರ್ ಮೌಲ್ಯ ಹೆಚ್ಚಾಗಿದ್ದು,ಡಿಸೆಂಬರ್ 9 ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸುವಂತೆ ಪಕ್ಷದ ಅಭ್ಯರ್ಥಿಗಳು ಡಿಕೆಶಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
15 ಕ್ಷೇತ್ರಗಳ ಪೈಕಿಯಲ್ಲಿ ಅರ್ಧ ಡಜನ್ ಕ್ಷೇತ್ರಗಳಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದಾರೆ. ಶುಕ್ರವಾರ ಶಿವಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಡಿಕೆಶಿ, ಅನರ್ಹ ಶಾಸಕರು ತಮ್ಮತನವನ್ನು ಮಾರಿಕೊಂಡಿರುವುದರ ಜೊತೆಗೆ ನೀವು ಕೊಟ್ಟಂತಹ ಜನಾದೇಶವನ್ನು ಮಾರಾಟ ಮಾಡಿದ್ದಾರೆ. ತಮ್ಮ ಸ್ವಂತ ತಾಯಿಗೆ ದ್ರೋಹ ಮಾಡಿದವರಿಗೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಪಾಠ ಕಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.
ಡಿಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದ ನಂತರ ಸ್ಟಾರ್ ವರ್ಚಸ್ಸು ಹೆಚ್ಚಾಗಿರುವಂತೆ ಅವರ ಮೇಲೆ ಕರುಣೆಯೂ ಬಂದಿದೆ. ಜೊತೆಗೆ ಪ್ರಭಾವಿ ಒಕ್ಕಲಿಗ ಅಂಶ ಮತ್ತೊಂದು ರೀತಿಯಲ್ಲಿ ಉಪ ಚುನಾವಣಾ ಕ್ಷೇತ್ರದಲ್ಲಿ ನೆರವು ನೀಡುತ್ತಿದೆ. ಇದೇ ಕಾರಣದಿಂದಾಗಿ ಪಕ್ಷದ ಅಭ್ಯರ್ಥಿಗಳು ಡಿಕೆಶಿ ತಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ಮಾಡುವಂತೆ ಮುಗಿ ಬೀಳುತ್ತಿದ್ದಾರೆ ಎಂದು ಪಕ್ಷದ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಜಾಮೀನಿನಿಂದ ಹೊರಬಂದ ಡಿಕೆ ಶಿವಕುಮಾರ್ ಅವರಿಗೆ ಕಳೆದ ತಿಂಗಳು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಳ್ಳಲಾಗಿತ್ತು. ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆದು ಡಿಕೆ ಶಿವಕುಮಾರ್ ಅವರಿಗೆ ವಹಿಸಲಾಗುತ್ತದೆ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ಹೊಸಕೋಟೆ, ಹುಣಸೂರು, ಕೆ. ಆರ್. ಪೇಟೆ ಮತ್ತು ಕೆ. ಆರ್. ಪುರಂನಲ್ಲಿ ಪ್ರಚಾರ ನಡೆಸಿರುವ ಡಿಕೆಶಿ ಮುಂದಿನ ದಿನಗಳಲ್ಲಿ ರಾಣಿ ಬೆನ್ನೂರು ಹಾಗೂ ಹಿರೇಕೆರೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


