ರಾಜಕೀಯ

ಮುಖಂಡರು,ಮತದಾರರಿಗೆ ಧಮ್ಕಿ: ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ- ಗೋಪಾಲಯ್ಯ ಸವಾಲು

ನಾನು ಯಾರಿಗೂ ತೊಂದರೆ ಮಾಡಿಲ್ಲ.ಯಾರಿಗೂ ಧಮ್ಕಿ ಹಾಕಿಲ್ಲ.ಯಾರಾದರೂ ತಮಗೆ ಧಮ್ಕಿ ಹಾಕಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಹಾಲಕ್ಷ್ಮೀ ಲೇಔಟ್ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ಸವಾಲು ಹಾಕಿದ್ದಾರೆ.

ಮುಖಂಡರು,ಮತದಾರರಿಗೆ ಧಮ್ಕಿ: ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ- ಗೋಪಾಲಯ್ಯ ಸವಾಲು
ಗೋಪಾಲಯ್ಯ
Published On :

ಬೆಂಗಳೂರು:  ನಾನು ಯಾರಿಗೂ ತೊಂದರೆ ಮಾಡಿಲ್ಲ.ಯಾರಿಗೂ ಧಮ್ಕಿ ಹಾಕಿಲ್ಲ.ಯಾರಾದರೂ ತಮಗೆ ಧಮ್ಕಿ ಹಾಕಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಹಾಲಕ್ಷ್ಮೀ ಲೇಔಟ್ ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ಸವಾಲು ಹಾಕಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತ ರನ್ನು ಮತ್ತು ಜನರ ಮೇಲೆ ತಾನು ಬೆದರಿಕೆ ಹಾಕುತ್ತಿದ್ದೇನೆಂಬ ಆರೋಪವನ್ನು ತಳ್ಳಿಹಾಕಿದರು.

ನಾನು ಯಾರಿಗಾದರೂ ಬೆದರಿಕೆ ಹಾಕಿದ್ದಕ್ಕೆ ಎಂಬುದರ ಒಂದು ಸಣ್ಣ ನಿದರ್ಶನ ತೋರಿಸಿದರೆ ರಾಜಕಾರಣದಿಂದ ನಿವೃತ್ತನಾಗುತ್ತೇನೆ.ಇದೆಲ್ಲಾ ಕುಮಾರಣ್ಣಗೆ ಗೊತ್ತು.ಚುನಾವಣೆ ಇರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ.ಅವರದ್ದೇ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ಏನು ಅನುದಾನ ಕೊಟ್ಟಿದ್ಧಾರೆ ಎಂಬುದು ಜನರಿಗೆ ಗೊತ್ತು ಎಂದು ಗೋಪಾಲಯ್ಯ ಆರೋಪಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.