ರಾಜಕೀಯ

ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಹಳ್ಳಿಗಳ ಕಡೆ ಮುಖ ಮಾಡಿದ ನಾಯಕರು!

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎರಡನೇ ಆವೃತ್ತಿಯ ಗ್ರಾಮ ವಾಸ್ತವ್ಯಕ್ಕೆ ಸಿದ್ದವಾಗಿದ್ದಾರೆ. ಅವರು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನಿಂದ ಗ್ರಾಮ ವಾಸ್ತವ್ಯ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ

ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಹಳ್ಳಿಗಳ ಕಡೆ ಮುಖ ಮಾಡಿದ ನಾಯಕರು!
2007ರಲ್ಲಿ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಒಂದು ಚಿತ್ರ
Published On :
ಮೈಸೂರು: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎರಡನೇ ಆವೃತ್ತಿಯ ಗ್ರಾಮ ವಾಸ್ತವ್ಯಕ್ಕೆ ಸಿದ್ದವಾಗಿದ್ದಾರೆ. ಅವರು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನಿಂದ ಗ್ರಾಮ ವಾಸ್ತವ್ಯ ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಆದರೆ ಈ ನಡುವೆ ಸಿಎಂ ಕುಮಾರಸ್ವಾಮಿಯವರ ಈ ಪ್ರಸ್ತಾವನೆ ಸಾರ್ವಜನಿಕರಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸಿದೆ. 
ಮುಖ್ಯವಾಗಿ ರೈತ ಸಮುದಾಯದಲ್ಲಿ ತಮ್ಮ ಸರ್ಕಾರದ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಲು ಕುಮಾರಸ್ವಾಮಿ ಹೀಗೆ ಗ್ರಾಮ ವಾಸ್ತವ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ  ರೈತರ ಬಗೆಗೆ ಕಾಳಜಿ ಇರುವ ಮುಖ್ಯಮಂತ್ರಿ ತಮಗೆ ಅಧಿಕಾರ ಸಿಕ್ಕು ಒಂದು ವರ್ಷಗಳ ಕಾಲ ಉಇಂತಹಾ ಯಾವ ಕಾರ್ಯಕ್ರಮ ನಡೆಸಿಲ್ಲವೇಕೆ ಎಂಬ ಪ್ರಶ್ನೆ ಎದ್ದಿದೆ. ಗ್ರಾಮದ ಜನರೇನಾದರೂ ಈ ಪ್ರಶ್ನೆ ಮುಂದಿಟ್ಟರೆ ಕುಮಾರಸ್ವಾಮಿಯವರಿಗೆ ಇದಕ್ಕೆ ತಕ್ಕ ಉತ್ತರ ಕೊಟ್ಟು ಜನರಿಗೆ ಮನವರಿಕೆ ಮಾಡುವುದು ಕಠಿಣವಾಗಲಿದೆ. ಇದಲ್ಲದೆ ಗ್ರಾಮವಾಸ್ತವ್ಯಕ್ಕೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಸಹ ಕಾರಣವೆನ್ನಲಾಗ್ದೆ. ಜನರ ಸಮಸ್ಯೆಗಳೇನು ಎಂಬುದನ್ನು ಪ್ರತ್ಯಕ್ಷ ಅರಿಯುವ ಸಂಬಂಧ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದಾರೆ.
ರೈತರು ಈಗಾಗಲೇ ತೊಂದರೆಯಲ್ಲಿದ್ದಾರೆ. ಪ್ರಸ್ತಾವಿತ ಗ್ರಾಮ ವಾಸ್ತವ್ಯ ವಿರೋಧ ಪಕ್ಷಗಳಿಗೆ ಮೈತ್ರಿ ಸರ್ಕಾರ ತಾನೇ ತಾನಾಗಿ ನಿಡುವ ಇನ್ನೊಂದು ಅಸ್ತ್ರವಾಗಲಿದೆ.ಬಿಜೆಪಿ ವಕ್ತಾರ  ಜಿ. ಮಧುಸೂದನ್ ಹೇಳಿದಂತೆ " ಕುಮಾರಸ್ವಾಮಿಗೆ ನೈತಿಕತೆ ಇಲ್ಲ  ಅವರ ಸಾಲ ಮನ್ನಾ ಭರವಸೆಗಳು "ಫ್ಲಾಪ್ ಶೋ" ಆಗಿವೆ. ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಒಂದು ದಿನ ಉಳಿಯುವಿಕೆ ಮುಖ್ಯವಾಗಿರುವುದಿಲ್ಲ. ಇದುವರೆಗೆ ಅವರು 42 ಸಾವಿರ ಕೋಟಿ ರೂ. ಸಾಲ ಮನ್ನಾ ಭರವಸೆ ನೀಡಿದ್ದು ಕೇವಲ 3 ಸಾವಿರ ಕೋಟಿ ರೂ ಮನ್ನಾ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ತಮ್ಮ ಕಾರ್ಯಕ್ರಮದ ವೈಫಲ್ಯದ ಬಗೆಗೆ ಸ್ಪಷ್ಟ ಕಾರಣ ಹಾಗೂ ಉತ್ತರದೊಡನೆ ಗ್ರಾಮಕ್ಕೆ ತೆರಳಬೇಕು. ಸಿಎಂ ಕುಮಾರಸ್ವಾಮಿ ರಾಜ್ಯಾಡಳಿತ ನಡೆಸುವ ಬದಲು ಪ್ರತಿದಿನವೂ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಾ ಇದ್ದಾರೆಂದು ಕಾಣುತ್ತಿದೆ.ನೀತಿ ಸಂಹಿತೆ ತೆಗೆದ ನಂತರವೂ ಆಡಳಿತ ಯಂತ್ರ ಸ್ಥಗಿತವಾಗಿದೆ.ಮಂತ್ರಿಗಳು, ಅಧಿಕಾರಿಗಳು ಬರಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಂಡಿಲ್ಲ. ಜನರಲ್ಲಿ ವಿಶ್ವಾಸವನ್ನು ಹುಟ್ಟುಹಾಕಲು ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಬರಗಾಲ ಪರಿಹಾರ ಕಾರ್ಯವನ್ನು  ಜಾರಿ ಸಂಬಂಧ ಪರಿಶೀಲನೆಗೆ ಮುಂದಾಗಿಲ್ಲ.. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ  ಇಬ್ಬರೂ ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡಿದ್ದಾರೆ.  ರೈತರು, ಶಿಕ್ಷಣತಜ್ಞರು ಮತ್ತು ಇತರರೊಂದಿಗೆ ಪರಸ್ಪರ ಸಂವಹನ ನಡೆಸುತ್ತಿದ್ದಾರೆ ಮತ್ತು ಅವರು ರೈತರ ಸಾಲ ಮನ್ನಾಗೆ ಪ್ರ`ಣಾಳಿಕೆಯಲ್ಲಿ ಆದ್ಯತೆ ನೀಡಿದ್ದು ಇದರ ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ ಎಂದು ಇನ್ನೊಂದು ವಾದವಿದೆ.
ಸಾಲ ಮನ್ನಾ ಜಾರಿಗೆ ಬ್ಯಾಂಕುಗಳು ಸಂಪೂರ್ಣ ಸಹಾಕಾರ ನೀಡಿಲ್ಲವಾಗಿ ಯೋಜನೆ ಜಾರಿ ವಿಳಂಬವಾಗುತ್ತಿದೆ. ಅಲ್ಲದೆ ಸಾಲ ಮನ್ನಾ ಆದ ನಂತರ ಹೊಸ ಸಾಲಗಳನ್ನು ಸಾಲ ಪಡೆಯುವ ಅವಕಾಶವನ್ನು ರೈತರಿಗೆ ನಿರಾಕರಿಸಲಾಗುತ್ತಿದೆ. ರಾಜ್ಯ ಕಬ್ಬು ಬೆಳೆಗಾರರ ​​ಸಂಘದ ಅಧ್ಯಕ್ಷ ಕರಬೂರು ಶಾಂತಕುಮಾರ್ ಹೇಳಿದಂತೆ ಸರ್ಕಾರ ಸಾಲ ಮನ್ನಾ ಮಾಡಲು ವಿಫಲವಾಗಿದೆ.ಕುಮಾರಸ್ವಾಮಿ ಮತ್ತು ಅವರ ಪಕ್ಷದ ನಾಯಕರು ಕೃಷಿಕರ ಸಮಸ್ಯೆಗಳ ಬಗ್ಗೆ ಮೊದಲ ಬಾರಿಗೆ ಮಾಹಿತಿ ಪಡೆದ ಬಳಿಕವೂ ಸ್ವಾಮಿನಾಥನ್ ಸಮಿತಿ ವರದಿ, ನಿರಂತರ ವಿದ್ಯುತ್ ಸರಬರಾಜು ಮತ್ತು ವೈಜ್ಞಾನಿಕ ಬೆಲೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಮೌನ ತಾಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದಿನ ಗ್ರಾಮ ವಾಸ್ತವ್ಯದ ವೇಳೆ ನೀಡಲಾದ ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಇದೆ. ಹಾಗಿರುವಾಗ ಮುಖ್ಯಮಂತ್ರಿಗಳು ಎರಡನೇ ಆವೃತ್ತಿಯ ಗ್ರಾಮ ವಾಸ್ತವ್ಯ ಮಾಡುವುದರ ಉದ್ದೇಶವೇನು? ಎಂದು ರೈತ ಮೋರ್ಛಾ ನಾಯಕ ನಂಜುಂಡೇಗೌಡ ಕೇಳುತ್ತಾರೆ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಅವರ ವೈಯುಕ್ತಿಕ ವರ್ಚಸ್ಸು ಹೆಚಿಸಬಹುದುಆದರೂ ಆಡಳಿತದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎನ್ನಲಾಗುವುದಿಲ್ಲ. ಅಲ್ಲದೆ ಮೈತ್ರಿ ಸರ್ಕಾರದ ಅಂಗಪಕ್ಷ ಕಾಂಗ್ರೆಸ್ ಶ ತನ್ನದೇ ಆದ ಭೀತಿಯನ್ನು ಹೊಂದಿದೆ.ಕುಮಾರಸ್ವಾಮಿ ಸಹಾನುಭೂತಿ ಸಾಧಿಸುವ ಸಲುವಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆಯೆ ಎಂದು ಅವರು ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.