ಕರ್ನಾಟಕ ವಿಧಾನಸಭೆಯ ಕೊನೆಯ 30 ನಿಮಿಷಗಳಲ್ಲಿ ಹಸಿವಿನ ನಾಟಕ!
ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ....

Published On :
ಬೆಂಗಳೂರು: ಕಳೆದೆರೆಡು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ಇಂದಾದರೂ ತೆರೆ ಬೀಳಲಿದೆಯೇ ಎನ್ನುವ ಕುತೂಹಲ ಆರಂಭವಾಗಿದೆ.
ನಿನ್ನೆ ನಡೆದ ವಿದಾನಸಭೆ ಅಧಿವೇಶನದ ಕೊನೆಯ 30 ನಿಮಿಷಗಳಲ್ಲಿ ಸದನದಲ್ಲಿ ಹಸಿವಿನ ನಾಟಕ ಆರಂಭವಾಯಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಧಿವೇಶನವನ್ನು ಮಂಗಳವಾರಕ್ಕೆ ಮುಂದೂಡುವಂತೆ ಒತ್ತಾಯಿಸುತ್ತಿದ್ದರು. ಸಕ್ಕರೆ ಕಾಯಿಲೆ ರೋಗಿಗಳಿದ್ದೇವೆ, ಮುಗಿಸಿ ಇಲ್ಲವೇ ಊಟ ತರಿಸಿಕೊಡಿ, ಇಲ್ಲವೇ ಅದ್ಯಾವುದು ಬೇಡ ಮಂಗಳವಾರಕ್ಕೆ ಮುಂದೂಡಿ ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಎರಡು ಕ್ಯಾಂಟೀನ್ ಗಳು ಕ್ಲೋಸ್ ಆಗಿದ್ದವು, ಸುಮಾರು 10.30 ರವೇಳೆಗೆ ಕೆಲ ಪಕ್ಷದ ಶಾಸಕರ ಸಹಾಯಕರು ಚಾಕೊಲೋಟ್ ಗಳನ್ನು ತಂದುಕೊಟ್ಟರು, ಸುಮಾರು 10.45ರ ವೇಳೆಗೆ ಬಿಜೆಪಿ ನಾಯಕ ಯಡಿಯೂರಪ್ಪ, ಚಾಕೋಲೋಟ್ ತಿಂದು ಬೇರೆಯವರಿಗೂ ಕೊಡುತ್ತಿದ್ದರು.
ಹಸಿವಿನ ನಾಟಕ ಸಿಎಂ ಕುಮಾರಸ್ವಾಮಿ ಅವರಿಗೂ ಅಚ್ಚರಿ ತಂದಿತು. ರಾತ್ರಿ 11.30ಕ್ಕೆ ಕಲಾಪವನ್ನು ಮುಂದೂಡಲಾಯಿತು. ಇಂದೇ ವಿಶ್ವಾಸಮತ ಯಾಚಿಸಬೇಕೆಂದು ಬಿಜೆಪಿ ಪಟ್ು ಹಿಡಿದಿತ್ತು, ಆದರೆ ಜೆಡಿಎಸ್ ನಾಯಕರು ಅದರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಆದರೆ ಅಂತಿಮವಾಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಆರ್ ವಿ ದೇಶಪಾಂಡೆ ಮಂಗಳವಾರ ಸಂಜೆಯೊಳಗೆ ವಿಶ್ವಾಸ ಮತಯಾಚನೆ ಮುಗಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಾತು ನೀಡಿದರು, ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


