ಬಿಜೆಪಿ ನಾಯಕ ಎಸ್.ಕೆ ನಟರಾಜ್-ರಾಮಲಿಂಗಾ ರೆಡ್ಡಿ ಭೇಟಿ, ಬಿಜೆಪಿ ಸೇರುವುದರ ಬಗ್ಗೆ ಕಾಂಗ್ರೆಸ್ ನಾಯಕ ಹೇಳಿದ್ದಿಷ್ಟು
ರೆಸಾರ್ಟ್ ನಿಂದ ರೆಸಾರ್ಟ್ ಗೆ ಜಿಗಿಯುತ್ತಿರುವ ಅತೃಪ್ತ ಶಾಸಕರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದ್ದರೆ,

Published On :
ಬೆಂಗಳೂರು: ರೆಸಾರ್ಟ್ ನಿಂದ ರೆಸಾರ್ಟ್ ಗೆ ಜಿಗಿಯುತ್ತಿರುವ ಅತೃಪ್ತ ಶಾಸಕರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದ್ದರೆ, ಇತ್ತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಇರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಮುಂದಿನ ನಡೆಯ ಬಗ್ಗೆಯೂ ಅಷ್ಟೇ ಕುತೂಹಲ ಮೂಡಿದೆ.
ಈ ನಡುವೆ ಬಿಜೆಪಿ ನಾಯಕ ಎಸ್.ಕೆ ನಟರಾಜ್ ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದ್ದು, ರಾಮಲಿಂಗಾ ರೆಡ್ಡಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ಎಸ್ ಕೆ ನಟರಾಜ್ ಭೇಟಿ ನಂತರ ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡಿರುವ ರಾಮಲಿಂಗಾ ರೆಡ್ಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಆದರೆ ನಾನಿನ್ನೂ ಕಾಂಗ್ರೆಸ್ ನಲ್ಲಿದ್ದೀನಿ, ಸಚಿವ ಸ್ಥಾನಕ್ಕೆ ಕೇಳಿಲ್ಲ. ನಾನಾಗಿಯೇ ಪಕ್ಷದ ನಾಯಕರೊಂದಿಗೆ ಮಾತನಾಡುವುದಿಲ್ಲ. ಅವರು ಬಂದರೆ ಮಾತನಾಡುತ್ತೇನೆ, ಬಿಜೆಪಿಗೆ ಹೋಗಲ್ಲ. ಪಕ್ಷದ ಬೆಳವಣಿಗೆಯಿಂದ ಬೇಸರಗೊಂಡು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿRamalinga ReddyResignationಕರ್ನಾಟಕರಾಮಲಿಂಗಾ ರೆಡ್ಡಿKarnataka politicsಕಾಂಗ್ರೆಸ್-ಜೆಡಿಎಸ್ ಸರ್ಕಾರಶಾಸಕರ ರಾಜೀನಾಮೆCongress-JDS MLAs
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


