ಶಾಸಕ ಮುನಿರತ್ನ ರಾಜಿನಾಮೆ ಪತ್ರ ಹರಿದು ಹಾಕಿದ್ದೆ ಅದಕ್ಕೆ ಏನಿವಾಗ: ಡಿಕೆ ಶಿವಕುಮಾರ್
ಆರ್. ಆರ್. ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ರಾಜಿನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ವೇಳೆ ಅಲ್ಲಿಗೆ ಬಂದ ಸಚಿವ ಡಿಕೆ ಶಿವಕುಮಾರ್ ಅವರು ಮುನಿರತ್ನರ ರಾಜಿನಾಮೆ...

Published On :
ಬೆಂಗಳೂರು: ಆರ್. ಆರ್. ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ರಾಜಿನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ವೇಳೆ ಅಲ್ಲಿಗೆ ಬಂದ ಸಚಿವ ಡಿಕೆ ಶಿವಕುಮಾರ್ ಅವರು ಮುನಿರತ್ನರ ರಾಜಿನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎಂದು ಸುದ್ದಿಯಾಗಿತ್ತು.
ಹೌದು. ದಿಢೀರ್ ಅಂತ ಸ್ಪೀಕರ್ ಕಚೇರಿ ಒಳಬಂದ ಡಿಕೆ ಶಿವಕುಮಾರ್ ರಾಜಿನಾಮೆ ಪತ್ರವನ್ನು ಕಿತ್ತುಕೊಂಡು ಹರಿದು ಹಾಕಿದ್ದರು. ಇದರಿಂದ ಮುನಿರತ್ನ ಅವರು ಸ್ವಲ್ಪ ಗೊಂದಲಕ್ಕೀಡಾಗಿ ಏನು ಮಾಡಲು ತೋಚದೆ ಸುಮ್ಮನಾಗಿದ್ದರು.
ಇನ್ನು ರಾಜಿನಾಮೆ ಪತ್ರ ಹರಿದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಹೌದು ಮುನಿರತ್ನರ ರಾಜಿನಾಮೆ ಪತ್ರವನ್ನು ಹರಿದು ಹಾಕಿದ್ದೀನಿ ಅದಕ್ಕೆ ಏನಿವಾಗ. ನಾನು ಪಕ್ಷ ಮತ್ತು ನನ್ನ ಮಿತ್ರರನ್ನು ರಕ್ಷಿಸಲು ಈ ರೀತಿ ಮಾಡಿದ್ದೀನಿ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಶಾಸಕರು ತಪ್ಪು ನಿರ್ಧಾರ ತೆಗೆದುಕೊಂಡಾಗ ಅದನ್ನು ತಡೆಯುವ ಹಕ್ಕು ನನಗಿದೆ. ಅದಕ್ಕೆ ಈ ರೀತಿ ಮಾಡಿದೆ. ರಾಜಿನಾಮೆ ಪತ್ರ ಹರಿದು ಹಾಕಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳಲು ನನ್ನ ಮಿತ್ರರು ಮುಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಇನ್ನು ಡಿಕೆಶಿ ರಾಜಿನಾಮೆ ಪತ್ರ ಹರಿದು ಹಾಕಿದ್ದರಿಂದ ಮುನಿರತ್ನ ಅವರು ಎರಡನೇ ಬಾರಿಗೆ ಬಂದು ರಾಜಿನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್PoliticsDK ShivakumarKarnatakaಕರ್ನಾಟಕಮುನಿರತ್ನMLAs resignationMuniratna ಡಿಕೆ ಶಿವಕುಮಾರ್ಶಾಸಕರ ರಾಜಿನಾಮೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


